ಹದೀಸ್
ಹದೀಸ್ ಪದದ ಮೂಲತಹ ಅರ್ಥ ಸಂಭಾಷಣೆ, ಮಾತುಕತೆ,ವಾರ್ತೆ,ಹೇಳಿಕೆ.
ಪರಿವಿಡಿ
- ಅಕ್ಷರಶಃ ಅರ್ಥ
- ಇಸ್ಲಾಮಿಕ್ ಪರಿಭಾಷೆ
- ಹದೀಸ್ ನ ರಚನೆ (ವಿನ್ಯಾಸ)
- ವರ್ಗೀಕರಣ (ವಿಭಜನೆ)
- ಆರು ಪ್ರಮುಖ ಅಹಾದೀಸ್ ನ ಸಂಕಲನಗಳು
- ಹದೀಸ್ ಪುಸ್ತಕಗಳು
- ಮುತ್ತಫ಼ಕ್ ಅಲೈಹ್ (ಸಮ್ಮತಿಪಡೆದ)
- ಉಲ್ಲೇಖಗಳು
ಅಕ್ಷರಶಃ ಅರ್ಥ :
ಪದಕೋಶದಲ್ಲಿ ಹದೀಸ್ ಅಂದರೆ ಸಂಭಾಷಣೆ ಎಂದರ್ಥ. ಖುರಾನಿನ ಈ ಸೂಕ್ತದ ಭೋದನೆಯ ಮಾಹಿತಿಯಂತೆ: “ಹಾಗಾದರೆ ಅವರು ಇಂತಹದ್ದೊಂದು ವಾಕ್ಯ ರಚನೆ ಮಾಡಿ ತರಲಿ ಸತ್ಯವಂತರಾಗಿದ್ದರೆ”.[ಸೂರಃ ಅತ್ತೂರ್ ೫೨-೩೪]
“ಮತ್ತು ಪ್ರವಾದಿ ತನ್ನ ಪತ್ನಿಯರಲ್ಲಿ ರಹಸ್ಯವಾಗಿ ಮಾತನಾಡಿದ ಸಂಧರ್ಭವನ್ನು ಸ್ಮರಿಸಿರಿ”.[ಸೂರಃ ಅತ್ತಹ್ರಿಮ್ ೬೬:೩]
ಇಸ್ಲಾಮಿಕ್ ಪರಿಭಾಷೆ:
ಹದೀಸನ್ನು ಸುನ್ನತ್ ಎಂದು ಸಹ ಕರೆಯಲಾಗುತ್ತದೆ.ಸಾಮಾನ್ಯವಾಗಿ ಈ ಪದದಿಂದ ಪ್ರವಾದಿಯ ಹೇಳಿಕೆಗಳನ್ನು ಉಲ್ಲೇಖಿಸಲಾಗುತ್ತದೆ. ಸಹಚರರು ಸಂಗ್ರಹಿಸಿದ ಪ್ರವಾದಿಯ ಸಂಭಾಷಣೆಯನ್ನು ಹದೀಸಿನ ಗ್ರಂಥಗಳಲ್ಲಿ ದಾಖಲಿಸಲಾಗಿದೆ. ಅಹಾದೀಸ್ ಇದು ಹದೀಸ್ ಪದದ ಬಹುವಚನ.
ಹದೀಸ್ ನ ರಚನೆ (ವಿನ್ಯಾಸ)
ಹದೀಸ್ ಎರಡು ಪ್ರಮೂಖ ಭಾಗಗಳಿಂದ ರಚನೆಗೊಳ್ಳುತ್ತದೆ.(ಅ)ಸನದ್ ಮತ್ತು (ಆ) ಮತನ್
ಸನದ್ ಎಂದರೆ: ಸನದ್ ಅಥವಾ ಇಸ್ನಾದ್ ವರದಿಗಾರರ ಸರಪಳಿ, ಹದೀಸಿನ ಪಠ್ಯ ನಮಗೆ ತಲುಪಿಸಲು ಇದು ಕಾರಣವಾಗುತ್ತದೆ.ಇದು ಪಠ್ಯವನ್ನು ತಲುಪಿಸುವ ಎಲ್ಲಾ ವರದಿಗಾರರನ್ನೊಳಗೊಂಡಿರುತ್ತದೆ. ಕೊನೆಯ ವರದಿಗಾರ (ತನ್ನ ಗ್ರಂಥದಲ್ಲಿ ಹದೀಸನ್ನು ಸಂಗ್ರಹಿಸಿದವ)ರಿಂದ ಪ್ರಾರಂಭಗೊಂಡು ಪ್ರವಾದಿಯರೊಂದಿಗೆ ಮುಕ್ತಾಯಗೊಳ್ಳುತ್ತದೆ.ಕೆಳಗಡೆ ಸನದಿನ ರೂಪವನ್ನು ಉಲ್ಲೇಖಿಸಲಾಗಿದೆ……..ಬುಖಾರಿ>ಮುಸದ್ದದ್>ಯಹ್ಯ>ಶುಅಬಾ>ಖತಾದ>ಅನಸ್>ಪ್ರವಾದಿ ಮುಹಮ್ಮದ್ (ಸಲ್ಲಲ್ಲಾಹು ಅಲೈಹಿ ವ ಸಲ್ಲಮ್).
ಮತನ್: ಹದೀಸಿನ ಪಠ್ಯ ಅಥವಾ ಪ್ರವಾದಿಯ ನಿರ್ದಿಷ್ಟ ಸಂಭಾಷಣೆ
ವರ್ಗೀಕರಣ
ಪ್ರಮುಖವಾಗಿ ಹದೀಸನ್ನು ಎರಡು ಭಾಗಗಳಲ್ಲಿ ವಿಂಗಡಿಸಲಾಗಿದೆ.
>> ಸಹೀಹ್ (ಪ್ರಬಲವಾದದ್ದು)
>> ಜಯೀಫ್ (ದುರ್ಬಲವಾದದ್ದು)
ಆರು ಪ್ರಮುಖ ಅಹಾದೀಸ್ ನ ಪುಸ್ತಕಗಳು
ನಾವು ಮುಸ್ಲಿಮರು ನಮಗೆ ಈ ಆರು ಹದೀಸಿನ ಪುಸ್ತಕಗಳು ಅತೀ ಪಮುಖವಾದವು.ಅವುಗಳು ಈ ಕೆಳಗಿನಂತಿವೆ.
- ಸಹೀಹ್ ಬುಖಾರಿ,ಸಂಗ್ರಹಕಾರರು ಇಮಾಮ್ ಬುಖಾರಿ(೮೭೦)೭೨೭೫ ಹದೀಸ್ ಗಳನ್ನೊಳಗೊಂಡಿದೆ.
- ಸಹೀಹ್ ಮುಸ್ಲಿಮ್, ಸಂಗ್ರಹಕಾರರು ಮುಸ್ಲಿಮ್ ಇಬ್ನುಲ್ ಹಜ್ಜಾಜ್ (೮೭೫)೯೨೦೦ ಹದೀಸ್ ಗಳನ್ನೊಳಗೊಂಡಿದೆ.
- ಸುನನ್ ಅಸ್ಸುಗ್ ರ, ಸಂಗ್ರಹಕಾರರು ಇಮಾಮ್ ಅನ್ನಸಾಇ (೯೧೫)
- ಸುನನ್ ಅಬು ದಾವುದ್, ಸಂಗ್ರಹಕಾರರು ಅಬು ದಾವುದ್ (೮೮೮)
- ಜಾಮಯಿ ಅತ್ತಿರ್ಮಿಝಿ ಸಂಗ್ರಹಕಾರರು (೮೯೨)
- ಸುನನ್ ಇಬ್ನು ಮಾಜ, ಸಂಗ್ರಹಕಾರರು ಇಬ್ನು ಮಾಜ(೮೮೭)
ಮೊದಲ ಎರಡು ಗ್ರಂಥಗಳು ತಮ್ಮ ಪ್ರಬಲತೆಯ ದೃಡೀಕರಣವನ್ನು ಸೂಚಿಸುತ್ತವೆ, ಇಬ್ನು ಹಜರ್ ರಹಿಮಹುಲ್ಲಾರ ಹೇಳಿಕೆಯ ಪ್ರಕಾರ, ಪುನರಾವರ್ತನೆಗಳನ್ನು ಏಣಿಸದೆ ಸಾಮಾನ್ಯವಾಗಿ ಏಳು ಸಾವಿರ ಅಹಾದೀಸ್ ಗಳನ್ನು ಹೊಂದಿರುತ್ತವೆ.
ಹದೀಸ್ ಪುಸ್ತಕಗಳು
- ಸಹೀಹುಲ್ ಬುಖಾರಿ
- ಸಹೀಹುಲ್ ಮುಸ್ಲಿಮ್
- ತಿರ್ಮಿಝಿ
- ನಸಾಇ
- ಅಬು ದಾವುದ್
- ಇಬ್ನು ಮಾಜ
- ಮುಸ್ನದ್ ಅಹ್ಮದ್
- ಮುವತ್ತಅ ಮಾಲಿಕ್
- ಸಹೀಹುಲ್ ಜಾಮಯಿ
- ಸಹೀಹ್ ಇಬ್ನು ಕುಝೈಮ
- ಮುಸ್ತದ್ರಕ್ ಅಲ್-ಹಾಕಿಮ್
- ಇಬ್ನು ಹಿಬ್ಬಾನ್
- ಮಿಶ್ ಕಾತ್ ಅಲ್-ಮಸಾಬೀಹ್
- ರಿಯಾದುಸ್ಸಾಲಿಹೀನ್ ಮತ್ತು ಇತರೆ.
ಮೊದಲ ಎರಡು ಗ್ರಂಥಗಳು ಸಹಿಹೈನ್ ಎಂದು ಸೂಚಿಸಲಾಗುತ್ತವೆ.ನಂತರದ ಆರು ಪುಸ್ತಕಗಳು ಕುತುಬುಸ್ಸಿತ್ತಾ ಎಂದು ಕರೆಯಲ್ಪಡುತ್ತವೆ. ಮುಸ್ಲಿಮರ ಬಹುಸಂಖ್ಯೆ ಇವುಗಳನ್ನು ಸಿಹಾಯೆ ಸಿತ್ತಾದಿಂದ ಗುರುತಿಸುತ್ತದೆ. ಕುತುಬುಸ್ಸಿತ್ತಾದ ಕೊನೆಯ ನಾಲ್ಕು ಪುಸ್ತಕಗಳಲ್ಲಿ ದುರ್ಬಲ ಹದೀಸ್ ಗಳಿವೆ ಎಂದು ವಿದ್ವಾಂಸರು ಗುರುತಿಸಿದ್ದಾರೆ.
ಮುತ್ತಫಕ್ ಅಲೈಹ್
ಮುತ್ತಫಕ್ ಅಲೈಹ್ ಅಥವಾ ಮುತ್ತಫಕುನ್ ಅಲೈಹ್ ಅಂದರೆ ಎರಡೂ ಹದೀಸ್ ಸಂಗ್ರಹಗಳಲ್ಲಿ ಸಹೀಹ್ ಬುಖಾರಿ ಮತ್ತು ಸಹೀಹ್ ಮುಸ್ಲಿಮ್ ಗಳಲ್ಲಿ ಸಮ್ಮತಿ ಪಡೆದ ಹದೀಸ್ ಎಂದರ್ಥ.ಮುತ್ತಫಕ್ ಅಲೈಹನ್ನು ಸಹೀಹೈನ್ ಎಂದು ಸಹ ಕರೆಯಲಾಗುತ್ತದೆ.
ಮೂಲಗಳು
ಶೇಕ್ ಡಾ!! ಸುಹೈಬ್ ಹುಸ್ಸೈನ್ ರ ಹದೀಸ್ ವರ್ಗೀಕರಿಸುವ ವಿಜ್ನಾನ ಪರಿಚಯ ಪುಸ್ತಕ
http://www.ahya.org/amm/modules.php?name=Sections&op=viewarticle&artid=7
http://www.islamweb.net/emerath/index.php?page=articles&id=38800