ಹಿರಾ ಗುಹೆ

ಕಿರು ಪರಿಚಯ:

ನೂರ್ ಪರ್ವತ ಮತ್ತು ಹಿರಾ ಗುಹೆ ಇವೆರಡು ಒಂದೆ,ಇಸ್ಲಾಮಿನ ಇತಿಹಾಸದಲ್ಲಿ ಮತ್ತು ಪ್ರವಾದಿಯ

ಜೀವನ ಚರಿತ್ರೆಯಲ್ಲಿ  ಇದಕ್ಕೆ ತನ್ನದೆ ಆದ ಪ್ರಮುಖ ಸ್ಥಾನ ದೊರೆತಿದೆ. ಮಾನವ ಇತಿಹಾಸದ ಮರೆಯಲಾಗದ ಪ್ರಸಂಗವು ಈ ಗುಹೆಯಲ್ಲಿ ಜರುಗಿದೆ. ಕುರ್ ಆನ್  ಅವತೀರ್ಣಗೊಳ್ಳುವ ಮುಂಚೆ ನೆಬಿವರ್ಯರು ಏಕಾಂಗಿಯಾಗಿ,ಏಕಚಿತ್ತರಾಗಿ ಅಲ್ಲಾಹನ ಆರಾದನೆ ಮಾಡುತ್ತಿದ್ದರು. ಇದೇ ಸ್ಥಳದಲ್ಲಿ ಪ್ರಥಮ ವಹೀಯಾದ

اقرأ باسم ربك الذي خلق)سورة العلق 1)  [1]

ಅರ್ಥ:-  (ಓ ನೆಬಿಯೇ) ನೀನು ಓದು ನಿನ್ನ ಸೃಷ್ಠಿಕರ್ಥನ ನಾಮದಿಂದ, ಎಂಬ ಸೂಕ್ತ ಅವತೀರ್ಣಗೊಂಡಿದೆ.

ಪರಿವಿಡಿ:

  • ಪ್ರಥಮ ವಹಿ ಅವತೀರ್ಣಗೊಂಡ ಸ್ಥಳ
  • ಹಿರಾ ಗುಹೆ ಎಲ್ಲಿದೆ
  • ಅದರ ಎತ್ತರದ ಬಗ್ಗೆ
  • ಅದರ ವೈಶಿಷ್ಟತೆಗಳು

ಪ್ರಥಮ ವಹಿ ಅವತೀರ್ಣಗೊಂಡ ಸ್ಥಳ:

ಪ್ರವಾದಿಯರಿಗೆ ವಹಿ ಪ್ರಾರಂಭವದದ್ದು ಸ್ವಪ್ನದ ಮುಖಾಂತರ,ಅವರ ಪ್ರತಿಯೊಂದು ಸ್ವಪ್ನವು ಪ್ರಭಾತದ ಪ್ರಕಾಶದಷ್ಟೇ ಸತ್ಯವಾದದ್ದು. ಪ್ರವಾದಿವರ್ಯರು ತಮ್ಮ ದಿನಚರಿಯಂತೆ ಹಿರಾ ಗುಹೆಗೆ ಬಂದು  ಆಹೋರಾತ್ರಿ ಅಲ್ಲಾಹನ ಆರಾಧನೆ ಮಾಡುತ್ತಿದ್ದರು, ಆಹಾರ ಪದಾರ್ಥಗಳು ಮುಗಿದ ಬಳಿಕ ಮನೆಗೆ ತೆರಳಿ ಮತ್ತೆ ಅಲ್ಲಿಗೆ ರವಾನೆಯಾಗುತ್ತಿದ್ದರು. ಒಂದು ಶುಭ ಕ್ಷಣದಲ್ಲಿ ಸತ್ಯ ಸಂದೇಶದೊಂದಿಗೆ ತೇಜಸ್ವೀಯಾದ ದೇವಚರ ಕಾಣಿಸಿ ಕೊಂಡರು. ದೇವನು ತನ್ನ ಉದ್ದೇಶಕ್ಕಾಗಿ ನಿಮ್ಮನ್ನು ಅಂತಿಮ ಪ್ರವಾದಿಯನ್ನಾಗಿ ನಿಯುಕ್ತಿಗೊಳಿಸಿದ್ದಾನೆ.  ನೀವು ಓದಿರಿ ನಿಮ್ಮ ಪ್ರಭುವಿನ ನಾಮದಿಂದ, ಎಂದಾಗ ನೆಬಿವರ್ಯರು ನಾನು ವಿದ್ಯೆಕಲಿತವನಲ್ಲ ಎಂದುತ್ತರಿಸಿದರು.ಮತ್ತೋಮ್ಮೆ ಜಿಬ್ರೀಲರು ಆಲಂಗಿಸಿ  ಹೇಳಿದರು ,ಓದಿರಿ. ಆಗಲೂ ಅವರಿಂದ ಅದೇ ಉತ್ತರವಾಗಿತ್ತು. ಆ ಮೇಲೂ ಮತ್ತೋಮ್ಮೆ ಜಿಬ್ರೀಲರು ಬಲವಾಗಿ ತಬ್ಬಿಕೊಂಡರು ಆಗ ವಿದ್ಯೆ ಪ್ರಾಪ್ತಿಯಾಗಿ ಅವರ ಜೊತೆ ಓದಿದರು. ಅವರ ಹೃದಯ ಅಲ್ಲಾಹನ ಪ್ರತಾಪದಿಂದ ತುಂಬಿತ್ತು, ಅವರ ದೇಹವು ಕಂಪಿಸತೊಡಗಿತ್ತು, ನಡುಗುತ್ತಲೇ ಮನೆ ಸೇರಿದರು. ಪತ್ನಿ ಖದೀಜರಲ್ಲಿ ತನಗೆ ಕಂಬಲಿ ಹೊದಿಸಲು ಹೇಳಿದರು. ಕಂಪಿಸುತ್ತಿರುವ ಅವರನ್ನು ನೋಡಿ ಖದೀಜ ಗಾಬರಿಗೊಂಡರು. ಕೂಡಲೇ ಕಂಬಳಿ ಹೊದಿಸಿ ಕಾರಣನನ್ನು ವಿಚಾರಿಸಿದರು.ಆಗ ತನ್ನ ಮೇಲೆ ಘಟಿಸಿದ ಪೂರ್ಣ ಪ್ರಸಂಗವನ್ನು ತಿಳಿಸಿದರು ಮತ್ತು ದೇವಪ್ರಭೆಯ ಭಯಭೀತಿಯಿಂದ ತನ್ನ ಜೀವ ಅಪಾಯದಲ್ಲಿದೆ ಎಂದು ಹೇಳಿದರು.ಖದೀಜಾ ತೃಪ್ತಿ ಸಾಂತ್ವಾನ ನಿಡುತ್ತಾ ಹೇಳಿದರು :”ನೀವು ಹೇದರದಿರಿ,ನಿಮ್ಮ ದೇವನು ನಿಮ್ಮೊಂದಿಗಿರುವನು,ಅವನು ಒಳ್ಳೆಯದನ್ನೇ ಮಾಡುವನು, ಯಾಕೆಂದರೆ ನೀವು ಅತಿಥಿಗಳಿಗೆ ಸತ್ಕರಿಸುತ್ತೀರಿ, ಚಾರಿತ್ರ್ಯವಂತ ರಾಗಿರುವಿರಿ,ಅಮಾನತ್ತನ್ನು ಪಾಲಿಸುತ್ತೀರಿ,ಕಷ್ಟದಲ್ಲಿರುವವರಿಗೆ ನೆರವಾಗುತ್ತೀರಿ,ಅನಾಥರನ್ನು ಸಂರಕ್ಷಿಸುತ್ತೀರಿ,ಯಾತ್ರಿಕರಿಗೆ ಸಹಕರಿಸುತ್ತೀರಿ ಮತ್ತು ಜನರೊಂದಿಗೆ ಉತ್ತಮವಾಗಿ ವರ್ತಿಸುತ್ತೀರಿ.ಖದೀಜಾರವರು ತಮ್ಮ ದೊಡ್ಡಪ್ಪನ ಪುತ್ರ ವರಕಾ ಬಿನ್ ನೌಫಲ್ ರ ಬಳಿ ಕರೆದೊಯ್ದರು ಮತ್ತು ಸಂಪೂರ್ಣ ಘಟನಾವಳಿಯನ್ನು ವಿವರಿಸಿ ಅದರ ಆಶಯಗಳೇನೆಂದು ವಿಚಾರಿಸಿದರು. ವರಕಾ ಬಿನ್ ನೌಫಲ್ ಆ ದೇವಚರ ಜಿಬ್ರೀಲ್ ಇವರೇ ಮೂಸಾರ ಬಳಿ ಹಾಜರಾದ ದೇವಚರರಾಗಿದ್ದಾರೆ ಖಂಡಿತವಾಗಿ ನಾನು ಜೀವಿಸಿದ್ದರೆ ನಿಮ್ಮ ಸಮುದಾಯ ನಿಮ್ಮನ್ನು ನಿಮ್ಮ ಊರಿಂದ ಹೊರಹಾಕುವಾಗ ನಿಮಗೆ ಸಹಾಯ ನೀಡುತ್ತಿದ್ದೇ, ಏನು ನನ್ನನ್ನು ನನ್ನ ಸಮುದಾಯ ಹೊರಹಾಕುವುದೇ? ವರಕಾ ಹೇಳಿದರು ಹೌದು,ಖಂಡಿತವಾಗಿ ನಿಮ್ಮ ಜನಾಂಗ ಹೊರಹಾಕುವುದು. ನಿಮಗಿಂತ ಮುಂಚೆ ಇಂತಹ ಶಿಕ್ಷಣ ತಂದವರ ಜೊತೆಗೂ ಜನತೆ ಈ ರೀತಿ ಮಾಡಿದೆ.ಒಂದು ವೇಳೆ ಆ ದಿವಸಗಳ ತನಕ ನನಗೆ ಬದುಕುವ ಅದೃಷ್ಟವಿದ್ದರೆ ನಿಮಗೆ ವಲಸೆ ಅನಿವಾರ್ಯಗೊಂಡಾಗ ನಾನು ನೆರವು ನೀಡುವೇನು ಎಂದರು.ಒಮ್ಮೆ ವಹಿ ಬರುವುದು ನಿಂತಾಗ ಪ್ರವಾದಿವರ್ಯರು ತುಂಬ ಮನನೊಂದರು ಪರ್ವತದ ಅಂಚಿನಲ್ಲಿ ಹೋದಾಗಲೆಲ್ಲ ನೀವು ನಿಸ್ಸಂದೇಹವಾಗಿಯೂ ಅಲ್ಲಾಹನ ಸಂದೇಶವಾಹಕರೆಂದು ಜಿಬ್ರೀಲರು ನುಡಿದಂತಾಗುತ್ತಿತ್ತು.

ವರದಿಗಾರರು : ಆಯಿಷಾ ಉಮ್ಮುಲ್ ಮೂಮಿನೀನ್  ಮುಹದ್ದೀಸ್ : ಬುಖಾರಿ ಗ್ರಂಥ: ಸಹೀಹುಲ್ ಬುಖಾರಿ ಪುಟ ಅಥವಾ ಸಂಖ್ಯೆ :6982

ಮುಹದ್ದೀಸರ ಸಂಕ್ಷಿಪ್ತ ಹುಕ್ಮ್: ಸಹೀಹ್ (2)

ಹಿರಾ ಗುಹೆ ಎಲ್ಲಿದೆ:

ಈ ಗುಹೆಯು ಹಿರಾ ಪರ್ವತದ ಮೇಲ್ಬಾಗದಲ್ಲಿದೆ,ಅಲ್ಲಿಂದ  ಇಸ್ಲಾಮಿನ ಪ್ರಕಾಶ ಹರಡಿದ ಕಾರಣ ಇದಕ್ಕೆ “ಜಬಲೆ ಹಿರಾ” ಎಂದು ಸಹ ಕರೆಯಲಾಗುತ್ತದೆ.ಇದು ಮಕ್ಕಾದಿಂದ ಅರಫಾತ್ ಗೆ ಹೋಗುವವರಿಗೆ ಪೂರ್ವ ದಿಕ್ಕಿಗೆ ಬರುತ್ತದೆ.

ಅದರ ಎತ್ತರದ ಬಗ್ಗೆ:

ಇದು ಮಕ್ಕಾ ಮುಕರ್ರಮಾದಿಂದ ನಾಲ್ಕು ಕೀ, ಮಿಟರ್ ದೂರದಲ್ಲಿದೆ.ಇದರ ಎತ್ತರ ಸುಮಾರು ೫೦೦ ಮೀಟರ್ ಇದೆ.ಪರ್ವತದ ಶಿಖರಕ್ಕೇರುವಾಗ ಪ್ರಾರಂಭದಲ್ಲಿ ನೈಸರ್ಗಿಕ ಮೆಟ್ಟಿಲುಗಳಿವೆ,ತದನಂತರ ನೋಡುಗರ ಸಹುಲತ್ತಿಗಾಗಿ ಕೃತಕ ಮೆಟ್ಟಿಲುಗಳನ್ನು ನಿರ್ಮೀಸಲಾಗಿದೆ.

ಅದರ ವೈಶಿಷ್ಟತೆಗಳು:

೧- ಕಾಬ ಭವನ ನಿರ್ಮಾಪಣೆಯಲ್ಲಿ ಇದರಿಂದಲೇ ಕಲ್ಲುಗಳನ್ನು ಬಳಸಲಾಗಿತ್ತು.

೨-ಪ್ರವಾದಿಗಳು ನುಬುವತ್ತಿನ ಮುಂಚೆ ಆ ಸ್ಥಳದಲ್ಲಿ ಆರಾಧನೆ ಮಾಡುತ್ತಿದ್ದರು.

೩-ಅಲ್ಲಿಂದಲೇ ವಹಿ ಪ್ರಾರಂಭಗೊಂಡಿತು ಇದು ಅಂತಿಮ ಪ್ರವಾದಿಯ ಇಬಾದತ್ತಿನ ಸ್ಥಳವಾಗಿತ್ತು.

೪- ಅದರ ಮೇಲೇರಿ ಮಕ್ಕಾದ ಭವ್ಯ ಭವನಗಳ ಮತ್ತು ಬೇರೆ ಪರ್ವತಗಳ ದೃಶ್ಯ ಸಾಕಾರವಾಗುತ್ತದೆ.

ಮೂಲಗಳು:

[1]

http://www.alawamr-ksa.com/vb/showthread.php?t=5543

[2]

http://dorar.net/hadith/index?skeys=%D8%BA%D8%A7%D8%B1+%D8%AD%D8%B1%D8%A7&page2

[3]

http://www.alawamr-ksa.com/vb/showthread.php?t=5543

[4]

http://www.startimes.com/f.aspx?t=32448341

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s