ಅಲ್-ಅಝಾನ್

ಕಿರು ಪರಿಚಯ:

ಪದಕೋಶದಲ್ಲಿ ಅಝಾನ್ ಎಂದರೆ ಮುಟ್ಟಿಸುವುದು ,ತಲುಪಿಸುವುದು .ಇದು ಮುಸ್ಲಿಮರ ಚಿನ್ಹೆಗಳಲ್ಲೊಂದಾಗಿದೆ,ನಮಾಝ್ ಮತ್ತು ಆರಾಧನೆಯೆಡೆಗೆ ಕರೆಯುವುದು ಮುಸ್ಲಿಮರ ಕರ್ಮ.

ಪರಿವಿಡಿ

  • ಅಝಾನ್ ಪದಕೋಶದಲ್ಲಿ
  • ಅಝಾನ್ ಶರಿಅತ್ತಿನಲ್ಲಿ
  • ಹದೀಸ್ ಗ್ರಂಥಗಳಲ್ಲಿ
  • ಅಝಾನಿನ ಪದಗಳು
  • ಅಝಾನಿನ ಉತ್ತರ
  • ಅಝಾನಿಗಿರುವ ಶ್ರೇಷ್ಟತೆ

ಅಝಾನ್ ಪದಕೋಶದಲ್ಲಿ: ಚಿನ್ಹೆ,ಗುರುತು,ಕುರುಹು . ಅಲ್ಲಾಹನು ಹೇಳುವನು

.وَأَذَانٌ مِنَ اللَّهِ وَرَسُولِهِ [التوبة: 3].

ನಮಾಝ್ ನ ಸಮಯವನ್ನು ಸೂಚಿಸುವ ಚಿನ್ಹೆ.                                   :ಅಝಾನ್ ಶರಿಅತ್ತಿನಲ್ಲಿ

ಹದೀಸ್ ಗ್ರಂಥಗಳಲ್ಲಿ: ಅಬ್ದುಲ್ಲಾ ಬಿನ್ ಝೈದ ಬಿನ್ ಅಬ್ದು ರಬ್ಬಿಃ ರವರ ವರದಿಯಂತೆ ಪ್ರವಾದಿ ಸಲ್ಲಲ್ಲಾಹು ಅಲೈಹಿವ ಸಲ್ಲಮರು ನಮಾಝಿಗೆ ಕಹಳೆಯ ಮೂಲಕ ಸೇರ್ಪಡಲು ಆದೇಶಿಸುವಾಗ ಇದು ಕ್ರೈಸ್ಥರ ಹೋಲಿಕೆ ಯಾಗುವುದೆಂದು ಚಿಂತಗ್ರಸ್ಥರಿದ್ದರು,ಆ ಸಂಧರ್ಭ ನನ್ನ ಸ್ವಪ್ನದಲ್ಲಿ ಓರ್ವ ಪ್ರತ್ಯಕ್ಷಗೊಂಡ ಆತನ ಮೈ ಮೇಲೆ ಎರಡು ಹಸಿರು ಬಣ್ಣದ ಬಟ್ಟೆಗಳಿದ್ದವು ಕೈ ಯಲ್ಲಿ ಕಹಳೆಯಿತ್ತು,ನಾನು ನೀನಿದನ್ನು  ಮಾರುವಿ ಏನು ಎಂದು ಪ್ರಶ್ನಿಸಿದೆ? ಉತ್ತರದಲ್ಲಿ ನೀನೇನು ಮಾಡುವೆ  ಇದರಿಂದ ? ಇದರ ಮೂಲಕ ನಮಾಝಿನೆಡೆಗೆ ಕರೆಯುವೇವು ಎಂದು ಉತ್ತರಿಸಿದೆ. ಅವನು ಇದಕ್ಕಿಂತ ಉತ್ತಮವಾದದ್ದನ್ನು ಹೇಳಿಕೊಡಲೆ ಎಂದಾಗ ನಾನು ಖಂಡಿತವಾಗಿ ಹೇಳು ಎಂದೆನು. ಆಗ ಅವನು ಅಲ್ಲಾಹು ಅಕ್ಬರ್ ………..(ಕೊನೆಯವರೆಗೆ )ಹೇಳು ಎಂದನು. ಸುಪ್ರಭಾತದೊಂದಿಗೆ ನಾನಿದನ್ನು ನೆಬಿವರ್ಯರಿಗೆ ಹೇಳಿದೆನು.ಅಲ್ಲಾಹನು ಇಚ್ಛಿಸಿದರೆ ಇದೊಂದು ಸತ್ಯ ಸ್ವಪ್ನ ವೆಂದು ನುಡಿದರು.ಮತ್ತು ನೀವು ಬಿಲಾಲರೊಂದಿಗೆ ನಿಲ್ಲಿರಿ ಅವರಿಗೆ ಹೇಳಿಕೊಡಿ ಅವರ ಧ್ವನಿ ನಿಮಗಿಂತ ಗಟ್ಟಿಯಾಗಿದೆ.ನಾನು ಹೇಳಿದಂತೆ ಅವರು ಹೇಳತೊಡಗಿದರು.ಅದನ್ನು ಆಲಿಸಿದ ಉಮರ್ ಬಿನ್ ಖತ್ತಾಬ್ ಮನೆಯಿಂದಲೇ ಬಟ್ಟೆಎಳೆಯುತ್ತಾ ಬಂದರು, ಮತ್ತು ನಿಮ್ಮನ್ನು ಸತ್ಯದೊಂದಿಗೆ ನಿಯೋಗಿಸಿದವನಾಣೆ ನಾನು ಸಹ ಇಂತಹದ್ದೇ ಸ್ವಪ್ನ ಕಂಡಿದ್ದೇನೆ.ಆಗ ಪ್ರವಾದಿ ಸಲ್ಲಲ್ಲಾಹು ಅಲೈಹಿವ ಸಲ್ಲಮರು ಸರ್ವಸ್ಥುತಿ ಅಲ್ಲಾಹನಿಗೆ ಮೀಸಲೇಂದರು.

ತಿರ್ಮಿಝಿ(189) ಅಬು ದಾವುದ್ (499) ಇಬ್ನು ಮಾಜಃ(706)

ಹದೀಸನ್ನು ಪುಷ್ಠಿಕರಿಸಿದವರು: ಇಬ್ನು ಖುಝೈಮಃ (189/1) ಇಬ್ನು ಹಿಬ್ಬಾನ್ (572/4) ಮತ್ತು ಅಲ್ಬಾನಿಯವರು ತಮಾಮುಲ್ ಮಿನ್ನಃ ದಲ್ಲಿ(ಪು ಸಂ 145).

ಈ ಹದೀಸಿನ ಮೂಲಕ ಸ್ಪಷ್ಟವಾಗುವುದೆಂದರೆ: ಅಝಾನಿನ ಪದಗಳು ಓರ್ವ ಸಹಾಬಿ ಕಂಡ ಸ್ವಪ್ನದ ಪದಗಳು ಇವುಗಳನ್ನು ನೆಬಿಯರು ದೃಡೀಕರಿಸಿದರು,ಇದು ಜನರಿಂದ ಬಂದಂತಹ ನಿಯೋಜಿತ ಯೋಜನೆ ಅಲ್ಲ. ಬದಲಾಗಿ ಇದೊಂದು ಸ್ವಪ್ನ.ಮತ್ತು ಕನಸ್ಸು  ಪ್ರವಾದಿತ್ವದ ಎಪ್ಪತ್ತು ಭಾಗಗಳಲ್ಲೋಂದಾಗಿದೆ.ಇಬ್ನು ಉಮರ್ ವರದಿಯ ಮೆರೆಗೆ :”ಸ್ವಪ್ನವು ಪ್ರವದಿತ್ವದ ಎಪ್ಪತ್ತು ಭಾಗಗಳಲ್ಲೋಂದಾಗಿದೆ”.ಮುಸ್ನದೆ ಅಹ್ಮದ್ (4449)

ಬುಖಾರಿಯಲ್ಲಿ ಈ ಪದಗಳೊಂದಿಗೆ :” ಒಳ್ಳೆಯ ಸ್ವಪ್ನವು ನುಬುವ್ವತ್ತಿನ ನಲವತ್ತಾರು ಭಾಗಗಳಲ್ಲೋಂದಾಗಿರುತ್ತದೆ“. ಬುಖಾರಿ (6474) ಮುಸ್ಲಿಂ (4203) ಮತ್ತು (42005)

ಅಝಾನಿನ ಪದಗಳು

 ಅಲ್ಲಹು ಅಕ್ಬರ್ ಅಲ್ಲಾಹು ಅಕ್ಬರ್- ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್

ಅಶ್ ಹದು ಅನ್ ಲಾ ಇಲಾಹ ಇಲ್ಲಲ್ಲಾಹು- ಅಸ್ ಹದು ಅನ್ ಲಾ ಇಲಾಹ ಇಲ್ಲಲ್ಲಾಹು,

ಅಶ್ ಹದು ಅನ್ನ ಮುಹಮ್ಮದ ರ್ರಸುಲೂಲ್ಲಾಹ್- ಅಶ್ ಹದು ಅನ್ನ ಮುಹಮ್ಮದ ರ್ರಸುಲೂಲ್ಲಾಹ್,

ಹಯ್ಯಾ ಅಲ ಸ್ಸಲಾತ್ –ಹಯ್ಯಾ ಅಲ ಸ್ಸಲಾತ್ ,

ಹಯ್ಯಾ ಅಲಲ್ ಫಲಾಹ್ –ಹಯ್ಯ್ ಅಲಲ್ ಫಲಾಹ್,

ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್, ಲಾ ಇಲಾಹ ಇಲ್ಲಲ್ಲಾಹ್ ,

ನೋಟಿಸು: ಫ್ರಭಾತದ ಆಝಾನಿನಲ್ಲಿ ಹಯ್ಯಾ ಅಲಲ್ ಫಲಾಹ್ ದ ನಂತರ ಅಸ್ಸಲಾತು ಖೈರುಂ ಮಿನನ್ನೌಮ್, ಅಸ್ಸಲಾತು ಖೈರುಂ ಮಿನನ್ನೌಮ್ ಎಂದು ಹೇಳತಕ್ಕದ್ದು.

 

ಅಝಾನಿನ ಉತ್ತರ:   

ಅಝಾನ್ ಆಲಿಸುವವರು ಮುಅಝ್ಝಿನ್ ಹೇಳಿದ್ದನ್ನೇ ಉತ್ತರವಾಗಿ ಹೇಳುವುದು ಮುಸ್ತಹಬ್ ಆಗಿರುತ್ತದೆ,ಅಬು ಸಯೀದ್ ರು ಪ್ರವಾದಿಗಳಿಂದ ವರದಿಮಾಡುತ್ತಾರೆ :” ಅಝಾನ್ ಆಲಿಸುವಾಗ ಮುಅಝ್ಝಿನ್ ಹೇಳಿದ್ದನ್ನೇ ಉತ್ತರವಾಗಿ ಹೇಳಬೇಕು”. ಕೇವಲ ಹಯ್ಯಾ ಅಲ ಸ್ಸಲಾತ್ ಮತ್ತು ಹಯ್ಯಾ ಅಲಲ್ ಫಲಾಹ್ ಎಂದು ಹೇಳುವಾಗ ಲಾ ಹೌಲ ವ ಲಾ ಖುವ್ವತ  ಇಲ್ಲ ಬಿಲ್ಲಾಹ್ ಎಂದು ಹೇಳಬೇಕು ಎಂದು ಉಮರ್ ಬಿನ್ ಖತ್ತಾಬ್ ರ  ರಿವಾಯತ್ತು ಸೂಚಿಸುತ್ತದೆ.

ನಂತರ ಪ್ರವಾದಿಗಳ ಮೇಲೆ ಸಲಾತನ್ನು ಓದಬೇಕು ,ತದನಂತರ :”ಅಲ್ಲಾಹುಮ್ಮ ರಬ್ಬ ಹಾಝಿಹಿ ದ್ದಅವತಿ-ತ್ತಾಮ್ಮತಿ ವ ಸ್ಸಲಾತಿಲ್ ಖಾಯಿಮತಿ ,ಆತಿ ಮುಹಮ್ಮದನಿಲ್ ವಸೀಲತ ವಲ್ ಫಝೀಲತ, ವಬ್ಅಸ್ ಹು ಮಖಾಮಮ್ಮಹ್ ಮೂದ ನಿಲ್ಲಝಿ ವ ಅದ್ತಹು, ಅಝಾನ್ ಆಲಿಸುವಾಗ ಯಾರು ಇದನ್ನು ಪಠಿಸುತ್ತಾರೋ ಅವರ ಪಾಲಿಗೆ ಖಿಯಾಮತ್ತಿನಂದು ನನ್ನ ಶಿಫಾರಸ್ಸು  ದೃಡವಾಗಿರುತ್ತದೆ.

ವರದಿಗಾರ: ಜಾಬಿರ್ ಬಿನ್ ಅಬ್ದುಲ್ಲಾಹ್   ಮುಹದ್ದೀಸ್: ಅಲ್ ಬುಖಾರಿ   ಗ್ರಂಥ: ಸಹೀಹುಲ್ ಬುಖಾರಿ  ಪುಟ ಅಥವಾ ಸಂಖ್ಯೆ :614

ಮುಹದ್ದೀಸರ ಸಂಕ್ಷಿಪ್ತ ಹುಕ್ಮ್ (ಆದೇಶ): ಸಹೀಹ್

ಅಝಾನಿನ ಶ್ರೇಷ್ಟತೆ: ಅಲ್ಲಾಹನು ಕುರ್ ಆನ್ ನಲ್ಲಿ ಹೇಳುವನು :

وَمَنْ أَحْسَنُ قَوْلًا مِّمَّن دَعَا إِلَى اللَّهِ وَعَمِلَ صَالِحًا وَقَالَ إِنَّنِي مِنَ الْمُسْلِمِينَ (33) سورة فصلت

ಅವರಿಗಿಂತ ಉತ್ತಮ ಮಾತು ಯಾರದ್ದಾಗಬಹುದು ಯಾರು ಅಲ್ಲಾಹನೆಡೆಗೆ ಕರೆಯುತ್ತಾರೆ,ಮತ್ತು ಒಳಿತಿನ ಕಾರ್ಯಗಳನ್ನು ಮಾಡುತ್ತಾರೆ ಹಾಗೂ ನಾನು ಮುಸ್ಲಿಮ್ ಸಮುದಾಯಕ್ಕೆ ಸೇರಿದವನೆಂದು ಹೇಳುತ್ತಾರೆ.

ಈ ಸೂಕ್ತವೂ ಮುಅಝ್ಝೀನರ ಕುರಿತು ಅವತೀರ್ಣಗೊಂಡಿದೆ, ಒಳಿತಿನ ಕಾರ್ಯಗಳನ್ನು ಮಾಡುತ್ತಾ,ಅಲ್ಲಾಹನೆಡೆ ಕರೆಯುವವರು ಶ್ರೇಷ್ಟರೆಂದು ಮೇಲ್ಕಂಡ ಸೂಕ್ತ ವ್ಯಕ್ತ ಪಡಿಸುತ್ತದೆ,ಅದೊಂದು  ಔಧಾರ್ಯ ಮತ್ತು ಸಕಲ ವಿಶ್ವಗಳ ಒಡೆಯನಿಂದ ಉತ್ಕೃಷ್ಟ ಫ್ರತಿಫಲವಾಗಿದೆ.

ಅಬು ಹುರೈರ(ರಝಿಯಲ್ಲಾಹು ಅನ್ಹು)ರ ವರದಿಯಂತೆ ಪ್ರವಾದಿ ಸಲ್ಲಲ್ಲಾಹು ಅಲೈಹಿವ ಸಲ್ಲಮರು ಹೇಳುತ್ತಾರೆ: ಜನರು ಅಝಾನ್ ಕೊಡುವ ಮತ್ತು ನಮಾಝಿನ ಫ್ರಥಮ ಸಫ್ಫಿನಲ್ಲಿರುವುದರ ಕುರಿತು ಅರಿತರೆ ಅದಕ್ಕಾಗಿ ವಿಧಿಯಾಕ ಬೇಕಾದೀತು, ಮತ್ತು ನಮಾಝಿಗಾಗಿ ಮುಂಬರುವ ಕುರಿತು ಗೋತ್ತಿದ್ದರೆ ಖಂಡಿತವಾಗಿಯೂ ಬರುತ್ತಿದ್ದರು ಹಾಗೂ ಇಶಾ ಮತ್ತು ಪ್ರಭಾತದಲ್ಲಿರುವ ಪ್ರತಿಫಲ ತಿಳಿದರೆ ಎರಗುತ್ತಾ ಆದರು ಬರುತ್ತಿದ್ದರು. (ಅಲ್ ಬುಖಾರಿ (615/2) ಮುಸ್ಲಿಮ್ (325/1/129)

ನಸಾಇ (539/1) ಮುಸ್ನದೆ ಅಹ್ಮದ್ (203/236/2)

ಮುಆವಿಯ( ರಝಿಯಲ್ಲಾಹು ಅನ್ಹು) ರವರು ಆಲಿಸಿದ್ದನ್ನು ವರದಿಮಾಡುತ್ತಾರೆ, ಪ್ರವಾದಿ ಸಲ್ಲಲ್ಲಾಹು ಅಲೈಹಿವ ಸಲ್ಲಮರು ಹೇಳುತ್ತಾರೆ: ಖಿಯಾಮತ್ತಿನಂದು ಮುಅಝ್ಝಿನರ ಕೊರಳು ಎತ್ತರದ್ದಾಗಿರುವುದು. ಮುಸ್ಲಿಂ (242/1) (387) ಕಿತಾಬು ಸ್ಸಲಾತ್,ಬಾಬು ಫಝ್ಲಿಲ್ ಅಝಾನ್)

ಮೂಲಗಳು:

http://islamqa.info/ar/7945

http://www.alimam.ws/ref/125

http://islamqa.info/ar/148871

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s