ರಮದಾನ್ ತಿಂಗಳು

ರಮದಾನ್ ತಿಂಗಳು ಮುಸ್ಲಿಮರ ಅತೀ ಸಡಗರ ಸಂಭ್ರಮದ ಮಾಸವೇಂದೆ ಪರಿಗಣಿಸಲ್ಪಡುತ್ತದೆ. ಅದು ಸಂಪೂರ್ಣ ವ್ರತಾಚರಣೆಯ ಮತ್ತು  ಇಸ್ಲಾಮಿನ ನಾಲ್ಕನೆಯ ಕಡ್ಡಾಯ ಕರ್ಮವಾಗಿದೆ. ಮಾನವಕಲ್ಯಾಣಕ್ಕಾಗಿ ಪ್ರವಾದಿ ಮುಹಮ್ಮದ್(ಸ)ರವರ ಮೇಲೆ ಇದೇ ತಿಂಗಳಲ್ಲಿ ಪವಿತ್ರ ಕುರಾನ್ ಅವತೀರ್ಣಗೊಳಿಸುವ ಮೂಲಕ ಇದಕ್ಕೆ ಶ್ರೇಷ್ಠತೆ ನೀಡಾಲಾಗಿದೆ.ಅದರೊಳಗಿನ ಒಂದು ರಾತ್ರಿ ಸಾವಿರ ತಿಂಗಳಿಗಿಂತ ಶ್ರೇಷ್ಠವಾಗಿದೆ.ರಮದಾನಿನ ಶ್ರೇಷ್ಠತೆ ಮತ್ತು ಅದರಲ್ಲಿ ಆಚರಿಸುವ ಆರಾಧನೆಗಳ ಮಹತ್ವದ ಕುರಿತು ಬಹಳಷ್ಟು ಆಸಾರ್ ಬಂದಿವೆ.

ಪರಿವಿಡಿ

  • ರಮದಾನ್ ಮತ್ತು ಅದಕ್ಕಿರುವ ಮಹತ್ವ
  • ರಮದಾನ್ ತಿಂಗಳ ಕಡ್ಡಾಯ ವ್ರತಾಚರಣೆ
  • ರದಾಮನಿನ ಶ್ರೇಷ್ಠತೆ
  • ಅದರ ಆರಾಧನೆಗಳ ಮಹತ್ವ
  • ತರಾವೀಹ್ ನಮಾಝ್
  • ರಮದಾನ್ ತಿಂಗಳ ಕೊನೆಯ ಹತ್ತು ದಿನಗಳು
  • ಇಅ್-ತಿಕಾಫ್
  • ಲೈಲತುಲ್ ಕದ್ರ್
  • ಪ್ರವಾಸಿಗರಿಗಿರುವ ಬಿಡುವು
  • ಉಲ್ಲೇಖಗಳು

ರಮದಾನ್ ಮತ್ತು ಅದಕ್ಕಿರುವ ಮಹತ್ವ

ರಮದಾನ್ ತಿಂಗಳು ಮುಸ್ಲಿಮರ ಅತೀ ಸಡಗರ ಸಂಭ್ರಮದ ಮಾಸವೇಂದೆ ಪರಿಗಣಿಸಲ್ಪಡುತ್ತದೆ. ಅದು ಸಂಪೂರ್ಣ ವ್ರತಾಚರಣೆಯ ಮತ್ತು  ಇಸ್ಲಾಮಿನ ನಾಲ್ಕನೆಯ ಕಡ್ಡಾಯ ಕರ್ಮವಾಗಿದೆ. ಮಾನವಕಲ್ಯಾಣಕ್ಕಾಗಿ ಪ್ರವಾದಿ ಮುಹಮ್ಮದ್(ಸ)ರವರ ಮೇಲೆ ಇದೇ ತಿಂಗಳಲ್ಲಿ ಪವಿತ್ರ ಕುರಾನ್ ಅವತೀರ್ಣಗೊಳಿಸುವ ಮೂಲಕ ಇದಕ್ಕೆ ಶ್ರೇಷ್ಠತೆ ನೀಡಾಲಾಗಿದೆ.ಅದರೊಳಗಿನ ಒಂದು ರಾತ್ರಿ ಸಾವಿರ ತಿಂಗಳಿಗಿಂತ ಶ್ರೇಷ್ಠವಾಗಿದೆ.ರಮದಾನಿನ ಶ್ರೇಷ್ಠತೆ ಮತ್ತು ಅದರಲ್ಲಿ ಆಚರಿಸುವ ಆರಾಧನೆಗಳ ಮಹತ್ವದ ಕುರಿತು ಬಹಳಷ್ಟು ಆಸಾರ್ ಬಂದಿವೆ.

ರಮದಾನ್ ತಿಂಗಳ ಕಡ್ಡಾಯ ವ್ರತಾಚರಣೆ

ಅಬ್ದುಲ್ಲಾ ಬಿನ್ ಉಮರ್ (س) ಹೇಳುತ್ತಾರೆ -ಪ್ರವಾದಿ()ಹೇಳಿದರು ಇಸ್ಲಾಮ್ ಐದು ಮೂಲಭೂತ ವಿಷಯಗಳನ್ನೊಳಗೊಂಡಿದೆ:ಅಲ್ಲಾಹನ ಹೊರತು ಅನ್ಯ ಆರಾಧ್ಯರಿಲ್ಲ ಮತ್ತು ಮುಹಮ್ಮದ್ () ಅಲ್ಲಾಹನ ಸಂದೇಶವಾಹಕರೆಂದು ಸಾಕ್ಷ್ಯ ವಹಿಸುವುದು .ನಮಾಝ್ ಸಂಸ್ಥಾಪಿಸುವುದು.ಝಕಾತ್ ಕೊಡುವುದು.ಹಜ್ಜ್ ಯಾತ್ರೆ ಕೈಗೊಳ್ಳುವುದು.ಮತ್ತು ರಮದಾನಿನ ಉಪವಾಸ ಆಚರಿಸುವುದು.[೧] ಮುತ್ತಫಕ್ ಅಲೈಹಿ.

ಅಬೂಹುರೈರಾ(س)ವರದಿ ಮಾಡುತ್ತಾರೆ: ಒಂದು ದಿನ ಪ್ರವಾದಿ()ಜನರ ಮಧ್ಯೆ ಇದ್ದಾಗ ಅಲ್ಲಿಗೆ ಜಿಬ್ರೀಲ್(÷)ಬಂದು “ಈಮಾನ್” ಎಂದರೇನು ಎಂದು ಪ್ರಶ್ನಿಸಿದರು. ಪ್ರವಾದಿ()”ಈಮಾನ್ ಎಂದರೆ ನೀನು ಅಲ್ಲಾಹನ ಮೇಲೆ,ದೇವಚರರ ಮೇಲೆ,ಕಿಯಾಮತ್ ನಲ್ಲಿ ಆತನನ್ನು ಭೇಟಿಯಾಗುವುದರ ಮೇಲೆ, ಆತನ ಪ್ರವಾದಿಗಳ ಮೇಲೆ ದೃಡವಿಶ್ವಾಸ ಇಡುವುದು ಮತ್ತು ಮರಣಾನಂತರ ಜೀವಂತ ಎಬ್ಬಿಸಲ್ಪಡುವುದನ್ನು ನಂಬುವುದಾಗಿದೆ ಎಂದು ಉತ್ತರಿಸಿದರು”.ಆಗ ಜಿಬ್ರೀಲರು ಇಸ್ಲಾಮ್ ಎಂದರೇನೆಂದರು? ಪ್ರವಾದಿ()ಹೇಳಿದರು,”ಇಸ್ಲಾಮ್ ಎಂದರೆ ನೀನು ಅಲ್ಲಾಹನೊಂದಿಗೆ ಯಾರನ್ನೂ ಸಹಭಾಗಿಗಳಾಗಿ ಮಾಡದಿರುವುದು,ಅವನಿಗೇ ಮಾತ್ರ ಆರಾಧಿಸುವುದು,ನಮಾಝ್ ಸಂಸ್ಥಾಪಿಸುವುದು,ಝಕಾತ್ ಕೊಡುವುದು ಮತ್ತು ರಮದಾನಿನ ಉಪವಾಸ ಆಚರಿಸುವುದು”.ಅವರು ಕೇಳಿದರು ಇಹ್ಸಾನ್(ಔದಾರ್ಯ)ಎಂದರೇನು? ಪ್ರವಾದಿ()ಹೇಳಿದರು,”ಇಹ್ಸಾನ್ ಎಂದರೆ ನೀನು ಅಲ್ಲಾಹನನ್ನು ನೋಡುತ್ತಿರುವಿ ಎಂಬಂತೆ ಆತನನ್ನು ಆರಾಧಿಸಬೇಕು, ಅದು ಸಾಧ್ಯವಿಲ್ಲವೆಂದಾದರೆ ಕನಿಷ್ಠಪಕ್ಷ ಅಲ್ಲಾಹನು ನಿನ್ನನ್ನು ನೋಡುತ್ತಿದ್ದಾನೆ ಎಂದು ಕೊಳ್ಳುವದಾಗಿದೆ”.ಅವರು ಕಿಯಾಮತ್ (ನಿರ್ಣಾಯಕ ದಿನ)ಯಾವಾಗ ಬರುವುದೆಂದು ಕೇಳಿದರು? ಪ್ರವಾದಿ() ನಿರ್ಣಾಯಕದಿನದ ಕುರಿತು ವಿಚಾರಿಸುವವನಿಗಿಂತ ಹೆಚ್ಚಿನ ಜ್ಞಾನ ವಿಚಾರಿಸಲ್ಪಡುವವನಿಗಿಲ್ಲ ಎಂದರು.ಆದರೆ ನಾನು ಅದರ ಕೆಲವು ಸಂಕೇತಗಳನ್ನು ಹೇಳುತ್ತೇನೆ.ದಾಸಿಯು ತನ್ನ ಒಡೆಯನನ್ನು ಜನ್ಮನೀಡುವಳು, ಒಂಟೆ ಮೇಯಿಸುವವರು ಬೃಹತ್ತಾದ ಭವ್ಯ-ಭವನಗಳ ನಿರ್ಮಾಣದಲ್ಲಿ ಪರಸ್ಪರ ಪೈಪೋಟಿ ನಡೆಸುವರು. ಒಟ್ಟಿನಲ್ಲಿ ಆ ದಿನದ ಕುರಿತು ಅಲ್ಲಾಹನೇ ಬಲ್ಲವನು (ವಿದ್ಯೆಯುಳ್ಳವನು).ತರುವಾಯ ಪ್ರವಾದಿ() ಈ ಸೂಕ್ತ ಪಠಿಸಿದರು

{إِنَّ اللَّهَ عِنْدَهُ عِلْمُ السَّاعَةِ وَيُنَزِّلُ الْغَيْثَ وَيَعْلَمُ مَا فِي الْأَرْحَامِ وَمَا تَدْرِي نَفْسٌ مَاذَا تَكْسِبُ غَداً وَمَا تَدْرِي نَفْسٌ بِأَيِّ أَرْضٍ تَمُوتُ إِنَّ اللَّهَ عَلِيمٌ خَبِيرٌ}()

ಅವರು ಹೋದ ಬಳಿಕ ಜನರಿಗೆ ಅವರನ್ನು ಕರೆಯುವಂತೆ ಹೇಳಿದರು.ಅವರು ಜನರಿಗೆ ಕಾಣದಾದಾಗ ಪ್ರವಾದಿ() ಹೇಳಿದರು ಅವರು ಜಿಬ್ರೀಲ(÷) ರು ಜನರಿಗೆ ಧರ್ಮದ ಕುರಿತು ಕಲಿಸಲು ಬಂದಿದ್ದರು.ಮುತ್ತಫಕ್ ಅಲೈಹಿ(೩).

ತಲ್ಹಾ ಬಿನ್ ಉಬೈದುಲ್ಲಾ(س) ಹೇಳುತ್ತಾರೆ: ಪ್ರವಾದಿ()ಅವರ ಬಳಿಗೆ ಓರ್ವ ಗ್ರಾಮೀಣ ಅರಬ ಬಂದ.ಆತನ ತಲೆಕೂದಲೂ ಕೆದರಿಕೊಂಡಿತ್ತು. ಪ್ರವಾದಿ()ರವರೆ ನನ್ನ ಮೇಲೆ ಕಡ್ಡಾಯಗೊಳಿಸಿದ ನಮಾಝ್ ಬಗ್ಗೆ ವಿವರಿಸಿರಿ ಎಂದು ಕೇಳಿದನು.ಐದು ನಮಾಝ್ ಗಳಿವೆ ನಫಿಲ್ ನಮಾಝ್ ಮಾಡಿದರೆ ಉತ್ತಮ ಎಂದರು.ತನ್ನ ಮೇಲೆ ಕಡ್ದಾಯಗೊಳಿಸಲಾದ ಉಪವಾಸದ ಕುರಿತು ವಿಚಾರಿಸಿದ.ಆಗ ಪ್ರವಾದಿ()ಹೇಳಿದರು ರಮದಾನಿನ ಉಪವಾಸ ವ್ರತಗಳೂ ಇವೆ ,ನಫಿಲ್ ಉಪವಾಸ ಆಚರಿಸಿದರೆ ಉತ್ತಮ ಎಂದರು.ತರುವಾಯ ತನ್ನ ಮೇಲೆ ಕಡ್ಡಾಯಗೊಳಿಸಲಾದ ಝಕಾತ್ ನ ಕುರಿತು ವಿಚಾರಿಸಿದರು.ಆಗ ಪ್ರವಾದಿ() ಅದರ ನಿರ್ದಿಷ್ಟ ಭಾಗವನ್ನು ಮತ್ತು ಅದರ ಅಹ್-ಕಾಮ್ ಗಳನ್ನು ತಿಳಿಸಿದರು.ಇದನ್ನು ಕೇಳಿ ವರದಿಗಾರ ಹೇಳುತ್ತಾರೆ-“ಅಲ್ಲಾಹನಾಣೆ ನಿಸ್ಸಂದೇಹವಾಗಿಯೂ ನೀವು ಸಂದೇಶವಾಹಕರಾಗಿರುವಿರಿ. ನಾನು ಇದಕ್ಕಿಂತ ಹೆಚ್ಚೂ ಮಾಡಲಾರೆ,ಕಡಿಮೆಯೂ ಮಾಡಲಾರೆ” ಎಂದು ಹೇಳುತ್ತಾ ಹೋದ. ಪ್ರವಾದಿ()ಹೇಳಿದರು: ಅವನು ಸತ್ಯ ಹೇಳಿದ್ದರೆ ವಿಜಯಿಯಾದ.ತನ್ನ ಮಾತಿನಲ್ಲಿ ನೈಜನಾಗಿದ್ದರೆ ಸ್ವರ್ಗ ಪ್ರವೇಶಿಸಿದ.(೪) ಮುತ್ತಫಕ್ ಅಲೈಹಿ.

ಅಬ್ದುಲ್ಲಾ ಬಿನ್ ಅಬ್ಬಾಸ್(ب)ಹೇಳುತ್ತಾರೆ- ಪ್ರವಾದಿ()ರ ಬಳಿಗೆ ಅಬ್ದುಲ್ ಕೈಸ್ ಗೋತ್ರದ ಒಂದು ತಂಡ ಆಗಮಿಸಿತು.ಪ್ರವಾದಿ() ಅವರನ್ನು ಸ್ವಾಗತಿಸಿ ನೀವು ಯಾವ ಗೋತ್ರದವರು,ಯಾವ ತಂಡದವರು ಎಂದು ಕೇಳಿದಾಗ ನಾವು ರಬೀಅದವರು ಎಂದುತ್ತರಿಸಿದರು.ಪ್ರವಾದಿ()ರು ನೀವು ಅವಮಾನಿತರೋ ದುಃಖಿತರೋ ಆಗಲಾರಿರಿ.ಅವರು ಹೇಳಿದರು.ಪ್ರವಾದಿವರ್ಯರೇ! ನಮ್ಮ ಮತ್ತು ನಿಮ್ಮ ಮಧ್ಯೆ ಮುದರ್ ಕುಟುಂಬದ ಸತ್ಯ ನಿಷೇಧಿಗಳು ಅಡ್ಡಿಯಾಗಿದ್ದಾರೆ.ಆದ್ದರಿಂದ ನಾವು ಈ ಪ್ರತಿಷ್ಠಿತ ತಿಂಗಳ ಹೊರತು ಬೇರಾವ ಸಮಯದಲ್ಲಿ ಬರುವಂತಿಲ್ಲ. ನಾವು ನಮ್ಮವರಿಗೆ ಮತ್ತು ಇತರರಿಗೆ ತಿಳಿಸುವಂತಾಗಲು ಮತ್ತು ಅವರು ಸ್ವರ್ಗಕ್ಕೆ ಹೋಗುವಂತಾಗಲು ಅನುಕೂಲವಾಗುವಂತೆ ನಮಗೆ ಸರಿಯಾದ ವಿಷಯವನ್ನೇ ತಿಳಿಸಿರಿ.ಅನಂತರ ಅವರು ಪಾನೀಯಗಳ ಕುರಿತು ವಿಚಾರಿಸಿದರು.ಪ್ರವಾದಿ()ಅವರಿಗೆ ನಾಲ್ಕು ವಿಷಯಗಳನ್ನು ಆದೇಶಿಸಿದರು ಮತ್ತು ನಾಲ್ಕು ವಿಷಯಗಳನ್ನು ನಿಷೇಧಿಸಿದರು.ಏಕನಾದ ಅಲ್ಲಾಹನ ಮೇಲೆ ವಿಶ್ವಾಸವಿರಿಸುವಂತೆ, ತರುವಾಯ ಈಮಾನ್ ಎಂದರೇನೆಂದು ನಿಮಗೆ ತಿಳಿದಿದೆಯೇ ಎಂದು ಕೇಳಿದರು.ಅವರು ಅವರು ಅಲ್ಲಾಹ್ ಮತ್ತು ಪ್ರವಾದಿವರ್ಯರೇ ಬಲ್ಲರೇಂದುತ್ತರಿಸಿದರು. ಪ್ರವಾದಿ()ಹೇಳಿದರು ಅಲ್ಲಾಹನ ಹೊರತು ಇನ್ನಾರೂ ಆರಾಧನೆಗೆ ಅರ್ಹರಿಲ್ಲ.ಅವನಿಗೆ ಯಾರೂ ಭಾಗಿದಾರಲಿಲ್ಲ ಮತ್ತು ಮುಹಮ್ಮದ್ ()ಅಲ್ಲಾಹನ ಸಂದೇಶವಾಹಕರು ಎಂದು ಸಾಕ್ಷ್ಯ ಹೇಳುವುದು ಈಮಾನ್ ಆಗಿರುತ್ತದೆ ಎಂದರು.ನಮಾಝ್ ಸರಿಯಾಗಿ ನಿರ್ವಹಿಸುವಂತೆ,ಝಕಾತ್ ಕೊಡುವಂತೆ,ರಮಝಾನಿನ ಉಪವಾಸ ಆಚರಿಸುವಂತೆ,ಸಮರಾರ್ಜಿತದ ಐದನೆಯ ಒಂದಂಶ ನೀಡುವಂತೆ ಆಜ್ಞಾಪಿಸಿದರು.( ೫) ಮುತ್ತಫಕ್ ಅಲೈಹಿ.

ಅನಸ್ ಬಿನ್ ಮಾಲಿಕ್(س) ಹೇಳುತ್ತಾರೆ: ಪ್ರವಾದಿ()ರಲ್ಲಿ ಒಂದು ವಿಷಯದ ಕುರಿತು ಕೇಳುವುದರಿಂದ ನಾವು ತಡೆಯಲ್ಪಟ್ಟಿದ್ದೇವೆ.ಆದ್ದರಿಂದ ಒಬ್ಬ ಹಳ್ಳಿಯ ಬುದ್ದಿವಂತ ವ್ಯಕ್ತಿ ಬಂದು ಆ ವಿಷಯದ ಕುರಿತು ನಮ್ಮ ಮುಂದೆ ವಿಚಾರಿಸಲೆಂದು ಆಸೆಪಡುತ್ತಿದ್ದೇವು.ಆಸೆಯಂತೆ ಒಬ್ಬ ಬಂದು ಪ್ರವಾದಿ ಮುಹಮ್ಮದ್ ()  ರೆ  ನಿಮ್ಮ ಸಂದೇಶವಾಹಕ ನಮ್ಮ ಬಳಿ ಬಂದು ನೀವು ಅಲ್ಲಾಹನೆಡೆಯಿಂದ ನಿಯೋಗಿಸಿಲ್ಪಟ್ಟಿದ್ದೀರೆಂದು ಹೇಳಿದ್ದಾನೆ ಇದು ಸತ್ಯವೇನು? ಅವರು ಹೌದು ಸತ್ಯ ಎಂದುತ್ತರಿಸಿದರು.ಆಕಾಶವನ್ನಾರು ಸೃಷ್ಠಿಸಿದರು?ಎಂದು ಕೇಳಿದ…………ನಿಮ್ಮ ಸಂದೇಶವಾಹಕರು ನಮ್ಮ ಮೇಲೆ ರಮದಾನ್ ತಿಂಗಳ ವ್ರತಾಚರಣೆ ಆಚರಿಸಲು ಹೇಳಿದ್ದಾರೆ. ಇದು ಸರಿಯೇ? ಪ್ರವಾದಿವರ್ಯರು:ಹೌದು ಸರಿ ಎಂದರು.ಆಗ ಅವನು ನಿಮ್ಮೊಟ್ಟಿಗೆ ಏನನ್ನು ನಿಯೋಗಿಸಲಾಗಿದೆ?ಎಂದನು. ಏನು ಅಲ್ಲಾಹನು ಇದರ ಆಜ್ಞೆ ನೀಡಿರುವನೇ? ಅವರು ಹೌದು ಎಂದರು……ಇದನ್ನು ಆಲಿಸಿದ ಅವನು ನಾನು ಇದರಲ್ಲಿ ಹೆಚ್ಚು ಮಾಡುವದಿಲ್ಲ ಮತ್ತು ಇದರಲ್ಲಿ ಕಡಿಮೆಯೂ ಮಾಡುವದಿಲ್ಲ ಎಂದು ಹೊರಟು ಹೋದನು.ಆಗ  ಪ್ರವಾದಿ() ಅವನು ತನ್ನ ಮಾತಿನಲ್ಲಿ  ನೈಜನಾಗಿದ್ದರೆ ಸ್ವರ್ಗ ಪ್ರವೇಶಿಸಿದ.(೬)

ಆಯಿಶಾ(ك)ಹೇಳುತ್ತಾರೆ:ಅಜ್ಞಾನ ಕಾಲದಲ್ಲಿ ಕುರೈಶರು ಆಶೂರಾದ ಉಪವಾಸ ಆಚರಿಸುತ್ತಿದ್ದರು. ಪ್ರವಾದಿ() ಜನರಿಗೆ ಅದರ ಆದೇಶ ನೀಡಿದರು.ಈ ಆದೇಶ ರಮದಾನಿನ ಉಪವಾಸ ಕಡ್ಡಾಯಗೊಳ್ಳುವವರೆಗಿತ್ತು(೭).ತದನಂತರ ಪ್ರವಾದಿ()ರು ಆಶೂರಾದ ಉಪವಾಸವನ್ನುದ್ದೇಶಿಸಿ ಅದನ್ನು ಇರಲು ಬಯಸುವರು ಆಚರಿಸಬಹುದು ಮತ್ತು ಇಚ್ಛಿಸದಿರುವರು ತೊರೆಯಬಹುದೆಂದರು.(೮) ಮುತ್ತಫಕ್ ಅಲೈಹಿ.

ಸಲಮಃ ಬಿನ್ ಅಕ್ವಅ್ (س) ಹೇಳುತ್ತಾರೆ:ಈ ಸೂಕ್ತ ಅವತೀರ್ಣಗೊಂಡ ಸಂಧರ್ಭ

(೯)  {وَعَلَى الَّذِينَ يُطِيقُونَهُ فِدْيَةٌ طَعَامُ مِسْكِينٍ}

ಆಗ ಉಪವಾಸ ತೊರೆಯಲು ಬಯಸಿದವರು ಫಿದಿಯಾ ಕೊಡುತ್ತಿದ್ದರು,ಇದರ ನಂತರದ ಸೂಕ್ತ ಅವತೀರ್ಣಗೊಂಡನಂತರ ಇದನ್ನು ಬಿಟ್ಟರು.(೧೦)

ಇನ್ನೊಂದು ವರದಿಯಲ್ಲಿ ಈ ಸಹಾಬಿ ಹೀಗೆ ಹೇಳುತ್ತಾರೆ:ಪ್ರವಾದಿ()ಕಾಲಘಟ್ಟದಲ್ಲಿ ನಾವು ಅವರೊಂದಿಗಿದ್ದಾಗ ಬಯಸಿದವರು ಉಪವಾಸ ಆಚರಿಸಿದರು,ಮತ್ತು ತೊರೆಯಬಯಸಿದವರು ನಿರ್ಗತಿಕರಿಗೆ ಉಣಿಸುವ ಮೂಲಕ ಫಿದಿಯಾ ಕೊಡುವ ಸಂಧರ್ಭ ಈ ಸೂಕ್ತ ಅವತೀರ್ಣಗೊಂಡಿತು

. { فَمَنْ شَهِدَ مِنْكُمُ الشَّهْرَ فَلْيَصُمْهُ}[11].[12] .

ರಮದಾನ್ ತಿಂಗಳ  ಶ್ರೇಷ್ಠತೆ

ಅಬೂಹುರೈರಾ(س) ಹೇಳುತ್ತಾರೆ- ಪ್ರವಾದಿ()ಹೇಳಿದರು:ರಮದಾನ್ ಬರುವಾಗ ಸ್ವರ್ಗದ ಬಾಗಿಲುಗಳನ್ನು ತೆರೆಯಲಾಗುತ್ತದೆ.ಇನ್ನೊಂದು ವರದಿ ಪ್ರಕಾರ, ಪ್ರವಾದಿ()ಹೇಳಿದರು-ರಮದಾನ್ ತಿಂಗಳು ಬಂದಾಗ ಆಕಾಶದ ದ್ವಾರಗಳನ್ನು ತೆರೆಯಲಾಗುತ್ತದೆ.ನರಕದ ಬಾಗಿಲುಗಳನ್ನು ಮುಚ್ಚಲಾಗುತ್ತದೆ.ಶೈತಾನರನ್ನು ಸಂಕೋಲೆಗಳಿಂದ ಬಿಗಿಯಲಾಗುತ್ತದೆ.(೧೩)

ಅಬ್ದುಲ್ಲಾ ಬಿನ್ ಅಬ್ಬಾಸ್(ب)ಹೇಳುತ್ತಾರೆ- ಪ್ರವಾದಿ()ರು ರಮದಾನನ್ನು ಹೊರತು ಪಡಿಸಿ ಬೇರಾವ ತಿಂಗಳಲ್ಲಿ ಸಂಪೂರ್ಣ ಮಾಸದ ಉಪವಾಸ ಆಚರಿಸಲಿಲ್ಲ.ಅವರನ್ನು ನೋಡುವವರು ಹೇಳುತ್ತಿದ್ದರು ಅಲ್ಲಾಹನಾಣೆ ಪ್ರವಾದಿವರ್ಯರು ಉಪವಾಸ ತೊರೆಯುತ್ತಿರಲಿಲ್ಲ.ಮತ್ತು ಉಪವಾಸ ಆಚರಿಸದ ಸಂಧರ್ಭದಲ್ಲಿ ನೋಡಿದವರು ಹೇಳುವರು ಅವರು ಉಪವಾಸ ಆಚರಿಸುತ್ತಿರಲಿಲ್ಲ.(೧೪) ಮುತ್ತಫಕ್ ಅಲೈಹಿ.

ಆಯಿಶಾ(ك)ಹೇಳುತ್ತಾರೆ- ಪ್ರವಾದಿ()ನಿರಂತರ ಉಪವಾಸದಲ್ಲಿರುತ್ತಿದ್ದರು.ಎಷ್ಟೆಂದರೆ ಇನ್ನೊಂದೂ ಅವರು ಉಪವಾಸ ತೊರೆಯಲಾರಲೆಂದು ನಾವು ಬಾವಿಸಿದೆವು.ಅದೇ ರೀತಿ ಅವರು ಇನ್ನೊಂದು ಉಪವಾಸವಿರಲಾರರೆಂದು ನಾವು ಭಾವಿಸುವಷ್ಟು ದೀರ್ಘ ಕಾಲದ ವರೆಗೆ ಉಪವಾಸ ವಿರುತ್ತಿರಲಿಲ್ಲ.ಆದರೆ  ಪ್ರವಾದಿ()ರಮದಾನಿನ ಹೊರತು ಯಾವುದೇ ತಿಂಗಳಲ್ಲಿ ನಿರಂತರ ಉಪವಾಸ ಆಚರಿಸುವುದನ್ನು ಹಾಗೂ ಶಅಬಾನ್ ಗಿಂತ ಹೆಚ್ಚು ಉಪವಾಸ ಆಚರಿಸುವುದನ್ನು ನಾನೆಂದೂ ಕಂಡಿಲ್ಲ.(೧೫)ಮುತ್ತಫಕ್ ಅಲೈಹಿ.                                                                                                                                           ಆಬ್ದುಲ್ಲಾ ಬಿನ್ ಶಖೀಖ್(س) ಹೇಳುತ್ತಾರೆ- ಪ್ರವಾದಿ()ರಮದಾನಿನ ಹೊರತು ಯಾವುದೇ ತಿಂಗಳಲ್ಲಿ ನಿರಂತರ ಉಪವಾಸವಿರುತ್ತಿದ್ದರೇನೆಂದು ನಾನು ಆಯಿಶಾ(ك)ರಿಗೆ ಕೇಳಿದೆ. ಅಲ್ಲಾಹನಾಣೆ ಅವರು ಹಾಗೆ ಮಾಡಿದ್ದನ್ನು ನಾನು ಕಂಡಿಲ್ಲಾ.(೧೬)ಇನ್ನೊಂದು ವರದಿಯಲ್ಲಿ ಆಯಿಶಾ(ك)ಹೇಳಿದರು:ಮದೀನಾ ಬಂದನಂತರ ಪ್ರವಾದಿ()ರಮದಾನಿನ ಹೊರತು ಯಾವುದೇ ತಿಂಗಳಲ್ಲಿ ನಿರಂತರ ಉಪವಾಸವಿರುತ್ತಿರಲಿಲ್ಲ.(೧೭)

ಅಬೂಹುರೈರಾ(س) ವರದಿಮಾಡುತ್ತಾರೆ- ಪ್ರವಾದಿ()ಹೇಳಿದರು-ಐದು ಹೊತ್ತಿನ ನಮಾಝ್,ಮತ್ತು  ಒಂದು ಜುಮಾ ಇನ್ನೊಂದು ಜುಮಾದವರೆಗೆ ಹಾಗೂ ಒಂದು ರಮದಾನ್ ಇನ್ನೊಂದು ರಮದಾನಿನ ವರೆಗಿನ ಪಾಪಗಳಿಗೆ ಪ್ರಾಯಶ್ಚಿತ್ತವಾಗಿದೆ.ದೊಡ್ಡ ದೊಡ್ಡ (ಮಹಾ)ಪಾಪಗಳಿಂದ ಉಳಿದರೆ.(೧೮)

ಅಬೂಹುರೈರಾ(س) ವರದಿಮಾಡುತ್ತಾರೆ- ಪ್ರವಾದಿ()ಹೇಳಿದರು -ರಮದಾನಿನ ಮೊದಲನೆಯ ರಾತ್ರಿಯಲ್ಲಿ ಶೈತಾನರನ್ನು ಮತ್ತು ಜಿನ್ನ್(ಯಕ್ಷ)ಗಳನ್ನು ಸಂಕೋಲೆಗಳಿಂದ ಬಿಗಿಯಲಾಗುತ್ತದೆ. ನರಕದ ಎಲ್ಲಾ ಬಾಗಿಲುಗಳನ್ನು ಮುಚ್ಚಲಾಗುತ್ತದೆ. ಸ್ವರ್ಗದ ಬಾಗಿಲುಗಳನ್ನು ತೆರೆಯಲಾಗುತ್ತದೆ.ಕರೆಗೊಡುವವನು ಕೂಗಿ ಹೇಳುತ್ತಾನೆ ಓ ಒಳಿತಿನ್ನು ಬಯಸುವವನೇ ಬಾ,ಮತ್ತು ಓ ಕೆಡುವನ್ನು ಆಶಿಸುವವನೇ ನಿಲ್ಲು.ಆ ರಾತ್ರಿ ಅಲ್ಲಾಹನು ನರಕದವರನ್ನು ಸ್ವತಂತ್ರಗೋಳಿಸುವನು ಇದೇ ರೀತಿ ಪ್ರತಿರಾತ್ರಿ ಮಾಡುವನು.(೧೯)

ಅಬೂ ಬಕ್ರಃ(س) ಹೇಳುತ್ತಾರೆ- ಪ್ರವಾದಿ()ಹೇಳಿದರು-ಎರಡು ಮಾಸಗಳು(ಪುಣ್ಯದಲ್ಲಿ)ಕಡಿಮೆ ಯಾಗುವುದಿಲ್ಲ ಅವುಗಳಲ್ಲೊಂದು ರಮದಾನ್ ಇನ್ನೊಂದು ದುಲ್ ಹಜ್ಜ್.(೨೦)  ಅಬೂಹುರೈರಾ(س) ಹೇಳುತ್ತಾರೆ- ಪ್ರವಾದಿ()ಹೇಳಿದರು -ರಮದಾನಿನ ಮುಬಾರಕ್ ತಿಂಗಳು ಬಂದಿದೆ,ಅಲ್ಲಾಹನು ಅದರಲ್ಲಿ ನಿಮ್ಮ ಮೇಲೆ ಅದರ ಉಪವಾಸವ್ರತವನ್ನು ಕಡ್ಡಾಯಗೊಳಿಸಿರುವನು, ಸ್ವರ್ಗದ ಬಾಗಿಲುಗಳನ್ನು ತೆರೆಯಲಾಗುತ್ತದೆ ಮತ್ತು ನರಕದ ಎಲ್ಲಾ ಬಾಗಿಲುಗಳನ್ನು ಮುಚ್ಚಲಾಗುತ್ತದೆ. ಶೈತಾನರನ್ನು ಸಂಕೋಲೆಗಳಿಂದ ಬಿಗಿಯಲಾಗುತ್ತದೆ ಅದರಲ್ಲಿ ಸಾವಿರ ತಿಂಗಳಿಗಿಂತ ಶ್ರೇಷ್ಟವಾದ ಒಂದು ರಾತ್ರಿ ಇದೆ ಯಾರು ಅದರಿಂದ ದೂರವಾಗುವರೊ ಅವರು ಎಲ್ಲಾ ಒಳಿತಿನಿಂದ ದೂರವಾದಂತೆ.(೨೧)

ಅಬೂಹುರೈರಾ(س)ವರದಿಮಾಡುತ್ತಾರೆ ಪ್ರವಾದಿ()ಹೇಳಿದರು: ರಮದಾನಿನ ಒಂದೋ,ಎರಡೋ ದಿವಸ ಮುಂಚೆ ಯಾರೂ ಉಪವಾಸವನ್ನು ಆಚರಿಸಬಾರದು.ಇನ್ನು ಒಬ್ಬನ ಯಾವುದಾದರು ಉಪವಾಸ ಆ ದಿವಸಗಳಲ್ಲಿದ್ದರೆ ಆಗ ಉಪವಾಸ ಆಚರಿಸಬಹುದು.(೨೨)

ಅದರ ಆರಾಧನೆಗಳ ಮಹತ್ವ

ಅಬೂಹುರೈರಾ(س) ವರದಿಮಾಡುತ್ತಾರೆ ಪ್ರವಾದಿ()ಹೇಳಿದರು:ಯಾರು ಲೈಲತುಲ್ ಕದ್ರ್ ನಂದು ಈಮಾನಿನೊಂದಿಗೆ ಪುಣ್ಯಫಲಾಪೇಕ್ಷೆಯಿಂದ ನಮಾಝಿಗಾಗಿ ನಿಲ್ಲುವನೋ ಅವನ ಗತ ಪಾಪಗಳೆಲ್ಲ ಕ್ಷಮಿಸಲ್ಪಡುವುದು.ಮತ್ತು ಯಾರು ಸತ್ಯವಿಶ್ವಾಸ ಹಾಗು ಪ್ರತಿಫಲಾಪೆಕ್ಷೇಯಿಂದ ರಮದಾನಿನ ಉಪವಾಸ ಆಚರಿಸುವರೋ ಅವರ ಗತ ಪಾಪಗಳೆಲ್ಲ ಕ್ಷಮಿಸಲ್ಪಡುವುವು.(೨೩)

ಅಬೂಹುರೈರಾ(س) ವರದಿಮಾಡುತ್ತಾರೆ ಪ್ರವಾದಿ()ಹೇಳಿದರು-ಯಾರು ಈಮಾನ್ ಮತ್ತು  ಪುಣ್ಯಫಲಾಪೇಕ್ಷೆಯಿಂದ ನಮಾಝಿಗಾಗಿ ನಿಲ್ಲುವರೋ ಅವರ ಗತ ಪಾಪಗಳೆಲ್ಲ ಕ್ಷಮಿಸಲ್ಪಡುವವು.(೨೪)

ಅಬೂಹುರೈರಾ(س)ಹೇಳುತ್ತಾರೆ-ಓರ್ವ ಹಳ್ಳಿಯ ಬದ್ದು ಪ್ರವಾದಿ()ಯ ಬಳಿ ಬಂದನು.ನನಗೆ ಸ್ವರ್ಗಕ್ಕೆ ತಲುಪಿಸುವಂತಹ ಒಂದು ಕರ್ಮ ಹೇಳಿಕೊಡಿ ಎಂದನು. ಪ್ರವಾದಿ()ಹೇಳಿದರು ಅಲ್ಲಾಹನೊಂದಿಗೆ ಸಹಭಾಗಿತ್ವ ಕಲ್ಪಿಸದಿರು,ನಮಾಝನ್ನು ಸ್ಥಿರಪಡಿಸು,ಝಕಾತನ್ನು ಕೊಡು,ರಮದಾನಿನ ಉಪವಾಸವ್ರತ ಆಚರಿಸು,ಯಾರ ಕೈಯಲ್ಲಿ ನನ್ನ ಜೀವವಿದೆಯೋ ಅವನಾಣೆ ನಾನು ಇದರಲ್ಲಿ ಸ್ವಲ್ಪವು ಹೆಚ್ಚಳ ಮಾಡುವುದಿಲ್ಲ ಎಂದು ಹೊರಟನು ಆಗ  ಪ್ರವಾದಿ()ಹೇಳಿದರು ಯಾರು ಸ್ವರ್ಗದವರನ್ನು ನೋಡಲು ಬಯಸುವರೋ ಅವರು ಈ ವ್ಯಕ್ತಿಗೆ ನೋಡಿಕೊಳ್ಳಲಿ ಎಂದರು.(೨೫)

ಅಬೂ ಖತಾದಃ(س)ಹೇಳುತ್ತಾರೆ-ಓಬ್ಬ ವ್ಯಕ್ತಿ ಪ್ರವಾದಿ()ಯ ಬಳಿ ಬಂದು ಉಪವಾಸ ಹೇಗೆ ಆಚರಿಸಬೇಕೆಂದು ವಿಚಾರಿಸಿದ.ಪ್ರಶ್ನೆ ಆಲಿಸಿದ ಪ್ರವಾದಿ()ಕೋಪಗೊಂಡರು ಇದನ್ನು ನೋಡಿದ ಉಮರ್ ಬಿನ್ ಖತ್ತಾಬ್(س)ಅಲ್ಲಾಹನು ನಮ್ಮ ಆರಾಧ್ಯನೆಂದು,ಇಸ್ಲಾಮ್ ನಮ್ಮ ಧರ್ಮವೆಂದು,ಮತ್ತು ಮುಹಮ್ಮದ್ ಸಂದೇಶವಾಹಕರೆಂದು ನಾವು ಸಂತೃಪ್ತರಾದೆವು,ನಾವು ಅಲ್ಲಾಹನಲ್ಲಿ ರಕ್ಷಣೆ ಕೋರುತ್ತೇವೆ ಅಲ್ಲಾಹನ ಆಕ್ರೋಶದಿಂದ ಮತ್ತು ಆತನ ಪ್ರವಾದಿಯ ಆಕ್ರೋಶದಿಂದ. ಪ್ರವಾದಿ()ಕೋಪ ಕಡಿಮೆಯಾಗುವತನಕ ಉಮರ್ ಬಿನ್ ಖತ್ತಾಬ್(س)ಇದನ್ನು ಹೇಳಿದರು.ತದನಂತರ ಪ್ರವಾದಿ()ಹೇಳಿದರು:ತಿಂಗಳಲ್ಲಿ ಮೂರುದಿನ,ಮತ್ತು ರಮದಾನಿನಿಂದ ಇನ್ನೊಂದು ರಮದಾನಿನವರೆಗೆ,ಯಾರು ಇದನ್ನು ಆಚರಿಸುವರೋ ಅವರು ಇಡೀ ವರ್ಷ ಉಪವಾಸ ಆಚರಿಸಿದಂತೆ ……..(೨೬)

ಅಬೂಅಯ್ಯೂಬ್ ಅನ್ಸಾರಿ(س)ಹೇಳುತ್ತಾರೆ  ಪ್ರವಾದಿ()ಹೇಳಿದರು-ಯಾರು ರಮದಾನಿನ ಉಪವಾಸವ್ರತ ಆಚರಿಸಿ ಮತ್ತು ಶವ್ವಾಲಿನ ಆರು ಉಪವಾಸ ಆಚರಿಸುವರೋ ಅವರು ಇಡೀ ವರ್ಷದ ಉಪವಾಸ ಆಚರಿಸಿದಂತೆ.(೨೭)

ಅಬೂಹುರೈರಾ(س) ವರದಿಮಾಡುತ್ತಾರೆ ಪ್ರವಾದಿ()ಹೇಳಿದರು-ರಮದಾನ್ ತಿಂಗಳ ಉಪವಾಸದ ನಂತರ ಶ್ರೇಷ್ಟ ಉಪವಾಸ ಮುಹರ್ರಮ್ ನ ಉಪವಾಸ.ಮತ್ತು ಕಡ್ದಾಯ ನಮಾಝಿನ ನಂತರ ಶ್ರೇಷ್ಟ ನಮಾಝ್ ರಾತ್ರಿಯ ನಮಾಝ್.(೨೮)

ಅಬೂಹುರೈರಾ(س) ವರದಿಮಾಡುತ್ತಾರೆ ಪ್ರವಾದಿ()ಹೇಳುತ್ತಾರೆ-ನಿಂದ್ಯನಾದ ಆ ವ್ಯಕ್ತಿ ಯಾರ ಮುಂದೆ ನನ್ನನ್ನು ಸ್ಮರಿಸಲಾಯಿತು ಮತ್ತು ಅವನು ನನ್ನ ಮೇಲೆ ದರೂದ್,ಸಲಾಮ್ ಕಳುಹಿಸಲಿಲ್ಲ. ಮತ್ತು ರಮದಾನ್ ಪಡೆದು ತನ್ನ ಗತ ಪಾಪಗಳ ಕ್ಷಮಾಪಣೆ ಪಡೆಯದವನು ನಿಂದ್ಯನಾದನು.ಹಾಗೂ ಯಾರು ಮಾತಾಪಿತರನ್ನು ಹೊಂದಿದ್ದು ಅವರಿಂದ ದುವಾ ಪಡೆಯಲಿಲ್ಲವೋ ಅವರೂ ನಿಂದ್ಯರಾದರು.(೨೯)

ಅಬೂಹುರೈರಾ(س) ವರದಿಮಾಡುತ್ತಾರೆ ಪ್ರವಾದಿ()ಹೇಳಿದರು- ಅಲ್ಲಾಹನ ಮೇಲೆ ಮತ್ತು ಆತನ ಸಂದೇಶವಾಹಕರ ಮೇಲೆ ವಿಶ್ವಾಸ ವಿರಿಸಿದ ಮತ್ತು ನಮಾಝ್ ಸ್ಥಿರಪಡಿಸಿದ,ರಮದಾನಿನ ಉಪವಾಸವ್ರತ ಆಚರಿಸಿದ,ಅಂತಹ ವ್ಯಕ್ತಿಯನ್ನು ಸ್ವರ್ಗ ಅನುಗ್ರಹಿಸುವ ಭಾದ್ಯತೆ ಅಲ್ಲಾಹನದ್ದಾಗಿರುತ್ತದೆ,ದೇವದಾರಿಯಲ್ಲಿ ಜಿಹಾದ್ ಮಾಡಿದವನು,ಅಥವಾ ತನ್ನ ಹುಟ್ಟುರಿನಲ್ಲಿ ನೆಲೆಸಿದವನು……………ಹದೀಸ್(೩೦)

ಅಬ್ದುಲ್ಲಾ ಬಿನ್ ಅಬ್ಬಾಸ್(ب) ಹೇಳುತ್ತಾರೆ ಪ್ರವಾದಿ()ರು ಒಳಿತಿನಲ್ಲಿ ಅತೀ ಉತ್ತಮರಾಗಿದ್ದರು, ಮತ್ತು ರಮದಾನ್ ತಿಂಗಳಲ್ಲಿ ಒಳಿತನ್ನು ತುಂಬಾ ಬಯಸುತ್ತಿದ್ದರು ಜಿಬ್ರೀಲ್÷ಪ್ರತಿ ರಾತ್ರಿ ಬರುವಾಗ ಪ್ರವಾದಿ() ಕುರ್ ಆನನ್ನು ಕೇಳಿಸುತ್ತಿದ್ದರು,ಅವರು ಒಳಿತಿನಲ್ಲಿ ಬಿರುಗಾಳಿಗಿಂತ ಮುಂದಿದ್ದರು.(೩೧)

ಅಬ್ದುಲ್ಲಾ ಬಿನ್ ಅಬ್ಬಾಸ್(ب) ಹೇಳುತ್ತಾರೆ ಪ್ರವಾದಿ()ರು ಹಜ್ಜಿನಿಂದ ತೆರಳಿದ ಬಳಿಕ ಉಮ್ಮೆ ಸಿನಾನ್ ಅನ್ಸಾರಿಯ್ಯಗೆ ಕೇಳಿದರು-ನಿನಗೆ ಹಜ್ಜಿನಿಂದ ತಡೆದದ್ದಾದರು ಏನು?ಉತ್ತರ:ಅವನ ತಂದೆ (ಅಂದರೆ ನನ್ನ ಪತಿ) ಅವನ ಬಳಿ ನೀರುಣಿಸುವ ಎರಡು ಒಂಟೆಗಳಿವೆ.(೩೨)ಒಂದೊಂಟೆಯಿಂದ ಹಜ್ಜ್ ಯಾತ್ರೆ ಕೈಗೊಂಡನು ಇನ್ನೊಂದು ನಮ್ಮ ನೆಲಕ್ಕೆ ನೀರುಣಿಸುತ್ತಿತ್ತು.ನಮ್ಮೊಂದಿಗೆ ರಮದಾನ್ ತಿಂಗಳಲ್ಲಿ  ಉಮ್ರಾವನ್ನಾದರು ಮಾಡು(೩೩) ಅದು ಪ್ರತಿಫಲಾಪೆಕ್ಷೇಯಲ್ಲಿ ಹಜ್ಜ್ ನ ಸಮವಾಗುತ್ತೆ(೩೪).

ಮುಆಝ್ ಬಿನ್ ಜಬಲ್(س)ಹೇಳುತ್ತಾರೆ-ಪ್ರವಾದಿ()ರೊಂದಿಗೆ ನಾನೊಂದು ಪ್ರವಾಸದಲ್ಲಿದ್ದೆ,ಅದೊಂದು ದಿನ ನಾನು ಅವರ ಹತ್ತಿರ ಹೋದೆ ಮತ್ತು ಓ ಪ್ರವಾದಿ() ನನಗೆ ಸ್ವರ್ಗಕ್ಕೊಯ್ಯುವ ಮತ್ತು ನರಕದಿಂದ ಉಳಿಸುವುದರ ಕುರಿತು ಉಪದೇಶಿಸಿರಿ ಎಂದೆ.ಉತ್ತರ:ನೀನು ತುಂಬಾ ಮಹತ್ತರ ವಿಷಯವನ್ನೇ ವಿಚಾರಿಸಿದ್ದಿಯಾ,ಆಲಿಸು, ಯಾರ ಮೇಲೆ ಅಲ್ಲಾಹನು ದಯೆತೋರುವನೋ ಅವನ ಮೇಲೆ ಅದು ಬಹಳ ಸುಲಭ,ನೀನು ಅಲ್ಲಾಹನ ಆರಾಧನೆ ಮಾಡು ಆರಾಧನೆಯಲ್ಲಿ ಅವನಿಗೆ ಸಹಭಾಗಿಯನ್ನಾಗಿ ಮಾಡಬೇಡ.ನಮಾಝನ್ನು ಸಂಸ್ಥಾಪಿಸು,ಝಕಾತನ್ನು ಪಾವತಿಸು,ರಮದಾನಿನ ಉಪವಾಸ ಆಚರಿಸು,ಹಜ್ಜ್-ಯಾತ್ರೆ ಮಾಡು………(೩೫)

ತರಾವೀಹ್ ನಮಾಝ್

ಆಯಿಶಾ(ك)ಹೇಳುತ್ತಾರೆ- ಪ್ರವಾದಿ()ಒಂದು ರಾತ್ರಿ ಮಸೀದಿಗೆ ಹೋಗಿ ನಮಾಝ್ ನಿರ್ವಹಿಸಿದರು,ಕೆಲವು ಜನರು ಅವರ ಹಿಂದೆ ನಿರ್ವಹಿಸಿದರು,ಮರುದಿನ ಜನರ ಸಂಖ್ಯೆ ಹೆಚ್ಚಿತು,ಮೂರನೆಯ ಅಥವಾ ನಾಲ್ಕನೆಯ ರಾತ್ರಿ ಬಹಳ ಹೆಚ್ಚು ಜನಸಂದಣಿಯಿಂದಾಗಿ   ಪ್ರವಾದಿ()ಹಾಜರಾಗಲಿಲ್ಲ,ಪ್ರಭಾತದಲ್ಲಿ ಫಜ್ರ್ ನಿರ್ವಹಿಸಿ ಜನರನ್ನುದ್ದೇಶಿಸಿ ಹೇಳಿದರು: ನಿಮ್ಮ ಒಳಿತಿನ ಆಸೆಯನ್ನು ನಾನು ನೋಡಿದೆ,ಮತ್ತು ನೀವು ನಮಾಝ್ ಗೆ ಬರುವುದರಿಂದ ನನಗೇನೂ ಸಂಕಟವಾಗಲಿಲ್ಲ,ಆದರೆ ಆ ನಮಾಝ್ ರಮದಾನಿನಲ್ಲಿ ಕಡ್ಡಾಯಗೊಳಿಸಲಾಗುವುದೇಂದು ನಾನು ಭಯಪಟ್ಟೆ(೩೬) ಇನ್ನೊಂದು ವರದಿಯಂತೆ[ಆ ನಮಾಝ್ ರಮದಾನಿನಲ್ಲಿ ಕಡ್ಡಾಯಗೊಳಿಸಲಾಗಿ ಅದನ್ನು ನಿರ್ವಹಿಸಲು ನಿಮಗೆ ಅಸಾಧ್ಯವಾದೀತೆಂದು ನಾನು ಭಯಪಟ್ಟೆ](೩೭)

ಅಬೂ ಸಲಮಃಬಿನ್ ಅಬ್ದುರ್ರಮ್ರಾನ್(س) ವರದಿಮಾಡುತ್ತಾರೆ-ನಾನು ಆಯಿಶಾ(ك)ರಿಗೆ ರಮದಾನಿನಲ್ಲಿ ಪ್ರವಾದಿ()ಯ[ತಹಜ್ಜುದ್] ನಮಾಝಿನ ಕುರಿತು ವಿಚಾರಿಸಿದಾಗ ಅವರು ಹೇಳಿದರು- ಪ್ರವಾದಿ()ರಮದಾನ್ ಮತ್ತು ರಮದಾನೇತರ ದಿನಗಳಲ್ಲಿ ೧೧ ರಕಾತ್ ಗಿಂತ ಹೆಚ್ಚು ನಮಾಜ್ ನಿರ್ವಹಿಸಲಿಲ್ಲ. ಮೊದಲು ನಾಲ್ಕು ರಕಾತ್ ನಿರ್ವಹಿಸುತ್ತಿದ್ದರು,ಅದರ ಸೌಂದರ್ಯ ಮತ್ತು ವಿಸ್ತಾರವನ್ನು ಕೇಳಬೇಡಿ.ಅನಂತರ ನಾಲ್ಕು ರಕಅತ್ ನಿರ್ವಹಿಸುತ್ತಿದ್ದರು,ಅದರ ಸೌಂದರ್ಯ ಮತ್ತು ವಿಸ್ತಾರವನ್ನು ವಿಚಾರಿಸಬೇಡಿ.ಅದಾದ ಬಳಿಕ ಮೂರು ರಕಅತ್ ವಿತ್ರ್ ನಿರ್ವಹಿಸುತ್ತಿದ್ದರು.ನಾನು,ಓ ಪ್ರವಾದಿಯವರೇ! ತಾವು ವಿತ್ರ್ ನಿರ್ವಹಿಸುವುದಕ್ಕಿಂತ ಮುಂಚೆ ಮಲಗುತ್ತೀರಾ ಎಂದು ಕೇಳಿದಾಗ ಆಯಿಶಾ(ك)ಹೇಳುತ್ತಾರೆ ಹೇಳಿದರು-ಆಯಿಶಾ ನನ್ನ ಕಣ್ಣು ನಿದ್ರಿಸುತ್ತದೆ.ಮನಸ್ಸು ನಿದ್ರಿಸುವುದಿಲ್ಲ.(೩೮)

ಅಬ್ದುರ್ರಾಹ್ಮಾನ್ ಬಿನ್ ಅಬ್ದುಲ್ ಖಾದಿರ್(س)ವರದಿಮಾಡುತ್ತಾರೆ-ನಾನು ರಮದಾನಿನ ಒಂದು ರಾತ್ರಿ ಉಮರ್ ಬಿನ್ ಖತ್ತಾಬ್(س)ರೊಂದಿಗೆ ಮಸೀದಿಗೆ ಹೋದೆ,ಅಲ್ಲಿ ಜನರು ಬೇರೆ-ಬೇರೆಯಾಗಿ[ಏಕಾಂಗಿಯಾಗಿ] ನಮಾಝ್ ನಿರ್ವಹಿಸುತ್ತಿದ್ದರು ಅದನ್ನು ಕಂಡ ಉಮರ್(س)ಇವರೆಲ್ಲರನ್ನು ಒಬ್ಬ ಇಮಾಮಿನೆಡೆಗೆ ಒಟ್ಟುಗೂಡಿಸಿದರೆ ಅದೇಷ್ಟು ಚಂದ ಎಂದು ಹೇಳಿದರು.ಇಚ್ಛೇಯಂತೆ ಅವರನ್ನು ಉಬೈ ಬಿನ್ ಕಅಬ್(س)ರ ಮೇಲೆ ಸೇರ್ಪಡಿಸಿದರು.ನಾನು ಇನ್ನೊಮ್ಮೆ ಅವರೊಡನೆ ಮಸೀದಿಗೆ ಹೋದೆ ಅಲ್ಲಿ ಜನರು ಇಮಾಮಿನೊಂದಿಗೆ ನಮಾಝ್ ನಿರ್ವಹಿಸುತ್ತಿದ್ದರು,ಅದನ್ನು ಕಂಡ ಉಮರ್ (س)ಇದೊಂದು ಒಳ್ಳೆಯ ನೂತನ ಕರ್ಮ ಎಂದು ಹೇಳಿದರು.ಕೊನೆಯ ದಿನಗಳಲ್ಲಿ ಮಲಗುವುದಕ್ಕಿಂತ ಆರಾಧನೆಯಲ್ಲಿ ಮಗ್ನವಾಗುವುದು ಉತ್ತಮ,ಆದರೆ ಜನರು ಮೊದಲ ರಾತ್ರಿಗಳಲ್ಲಿ ಕಿಯಾಮುಲ್ಲೈಲ್ ಮಾಡುತ್ತಿದ್ದರು.(೩೯)

ರಮದಾನ್ ತಿಂಗಳ ಕೊನೆಯ ಹತ್ತು ದಿನಗಳು

ಆಯಿಶಾ(ك)ಹೇಳುತ್ತಾರೆ-ಕೊನೆಯ ಹತ್ತು ರಾತ್ರಿಗಳು ಬರುವಾಗ ಪ್ರವಾದಿ()  ಬಿಗಿಯಾಗಿ ಟೊಂಕ ಕಟ್ಟುತ್ತಿದ್ದರು,ತಾವು ಎಚ್ಚರದಿಂದಿರುತ್ತಿದ್ದರು,ಮನೆಯವರನ್ನೂ ಎಬ್ಬಿಸುತ್ತಿದ್ದರು(೪೦)

ಆಯಿಶಾ(ك)ಹೇಳುತ್ತಾರೆ- ಪ್ರವಾದಿ()ರಮದಾನಿನ ಕೊನೆಯ ಹತ್ತು ರಾತ್ರಿಗಳಲ್ಲಿ ಬಹಳ ಶ್ರಮಿಸುತ್ತಿದ್ದರು,ಅದರಂತೆ ಬೇರೆದಿನಗಳಲ್ಲಿ ಶ್ರಮಿಸುತ್ತಿರಲಿಲ್ಲ.(೪೧)

ಇಅ್ತಿಕಾಫ್  :ಅಬೂಸಲಮಃ(س)ವರದಿಮಾಡುತ್ತಾರೆ-ನಾನು ಅಬೂಸಯೀದ್ ಖುದ್ರಿ(س)ಬಳಿ ಹೋದೆ ಮತ್ತು ಅವರಿಗೆ ನನ್ನೊಡನೆ ಖರ್ಜೂರದ ತೋಟದೆಡೆಗೆ ಹೊರಡಲು ವಿನಂತಿಸಿದೆ,ಅವರು ಒಪ್ಪಿಗೆಯೊಂದಿಗೆ ಹೊರಟರು ಆಗ ನಾನು ಅವರಲ್ಲಿ ಲೈಲತುಲ್ ಕದ್ರ್ ಕುರಿತು ಚರ್ಚಿಸಿದೆ,ಉತ್ತರ: ಪ್ರವಾದಿ()  ರಮದಾನಿನ ಮೊದಲ ದಶಕದಲ್ಲಿ ಇಅ್-ತಿಕಾಫ್ ಮಾಡಿದರು ನಾವು ಸಹ ಮಾಡಿದೆವು,ಜಿಬ್ರೀಲ್(÷) ಪ್ರವಾದಿ()ರಿಗೆ ನೀವು ಬಯಸಿದ್ದು ಮುಂದಿದೆ ಎಂದರು, ರಮದಾನಿನ ೨೦ನೆಯ ಸುಪ್ರಭಾತದಲ್ಲಿ ಜನರನ್ನುದ್ದೇಶಿಸಿ :ಜನರೇ ಯಾರು ನನ್ನೊಡನೆ  ಇಅ್-ತಿಕಾಫ್ ಆಚರಿಸಿದ್ದಾರೋ ಅವರು ಮತ್ತೊಮ್ಮೆ ಆಚರಿಸಲಿ,ನನಗೆ ಲೈಲತುಲ್ ಕದ್ರ್ ತೋರಿಸಲಾಗಿತ್ತು ಮತ್ತೆ ನಾನದನ್ನು ಮರೆಸಲ್ಪಟ್ಟೆ,ಖಂಡಿತವಾಗಿಯೂ ಅದು ಕೊನೆಯ ದಶಕದ ವಿತ್ರ್ ಗಳಲ್ಲಿದೆ,ನಾನು ನೀರು ಮತ್ತು ಮಣ್ಣಿನಲ್ಲಿ ಸಜ್ದಾ ಮಾಡುವುದನ್ನು ಕಂಡೆ,ಮಸೀದಿಯ ಮಾಳಿಗೆ ಕರ್ಜುರದ ಚಪ್ಪರದ್ದಾಗಿತ್ತು,ಆಕಾಶದಲ್ಲೇನಿರಲಿಲ್ಲ, ಅಷ್ಟರಲ್ಲಿ ಮೊಡಆವರಿಸಿ ಮಳೆ ಸುರಿಯಿತು,ವರದಿಗಾರ ಹೇಳುತ್ತಾರೆ; ಪ್ರವಾದಿ() ಸುರಿಯುವ ಮಳೆಯಲ್ಲಿಯೇ ನಮಾಝ್ ಸಲ್ಲಿಸಿದರು ನಾನವರ ಹಣೆಯ ಮೇಲೆ ಮಣ್ಣು ಮತ್ತು ನೀರಿನ ಗುರುತನ್ನು ನೋಡಿದೆ.(೪೨)

ಆಯಿಶಾ(ك)ಹೇಳುತ್ತಾರೆ ಪ್ರವಾದಿ() ರಮದಾನಿನ ಕೊನೆಯ ದಶಕದಲ್ಲಿ ಇಅ್-ತಿಕಾಫ್ ಮಾಡುತ್ತಿದ್ದರು, ಅವರ ನಿಧನದ ನಂತರ ಪ್ರವಾದಿ() ಪತ್ನಿಯರು  ಇಅ್-ತಿಕಾಫ್ ಆಚರಿಸುತ್ತಿದ್ದರು.(೪೩)

ಅಬ್ದುಲ್ಲಾ ಬಿನ್ ಉಮರ್(ب) ಹೇಳುತ್ತಾರೆ: ಪ್ರವಾದಿ() ರಮದಾನಿನ ಕೊನೆಯ ದಶಕದಲ್ಲಿ ಇಅ್-ತಿಕಾಫ್ ಮಾಡುತ್ತಿದ್ದರು.(೪೪)

ಅಬೂಹುರೈರಾ(س)ಹೇಳುತ್ತಾರೆ: ಪ್ರವಾದಿ() ಪ್ರತಿ ರಮದಾನಿನಲ್ಲಿ ಹತ್ತು ದಿನ ಇಅ್-ತಿಕಾಫ್ ನಲ್ಲಿರುತ್ತಿದ್ದರು ಆದರೆ ನಿಧನಗೊಂಡ ವರ್ಷ  ಪ್ರವಾದಿ()ರು ಇಪ್ಪತ್ತು ದಿನ  ಇಅ್-ತಿಕಾಫ್ ಆಚರಿಸಿದರು.(೪೫)

ಉಬೈ ಬಿನ್ ಕಾಬ್(س)ಹೇಳುತ್ತಾರೆ: ಪ್ರವಾದಿ()ರು ರಮದಾನಿನ ಕೊನೆಯ ದಶಕದಲ್ಲಿ ಇಅ್-ತಿಕಾಫ್ ಮಾಡುತ್ತಿದ್ದರು,ಒಮ್ಮೆ ರಮದಾನಿನಲ್ಲಿ ಪ್ರವಾಸ ಕೈಗೊಂಡರು ಇಅ್-ತಿಕಾಫ್ ಆಚರಿಸಲಾಗಲಿಲ್ಲ ಆದ್ದರಿಂದ ಬರುವರ್ಷ ಪ್ರವಾದಿ() ರು ಇಪ್ಪತ್ತು ದಿನ  ಇಅ್-ತಿಕಾಫ್ ಆಚರಿಸಿದರು(೪೬)

ಲೈಲತುಲ್ ಕದ್ರ್ :ಆಯಿಶಾ(ك)ಹೇಳುತ್ತಾರೆ ಪ್ರವಾದಿ() ಹೇಳಿದರು-ರಮದಾನಿನ ಕೊನೆಯ ಹತ್ತು ದಿನಗಳ ವಿತ್ರ್ ರಾತ್ರಿಗಳಲ್ಲಿ ಲೈಲತುಲ್ ಕದ್ರ್ ಹುಡುಕಿ(೪೭)ಬುಖಾರಿಯ ವರದಿಯಂತೆ-ಪ್ರವಾದಿ()ರಮದಾನಿನ ಕೊನೆಯ ಹತ್ತರಲ್ಲಿ ಮಲಗುತ್ತಿರಲಿಲ್ಲ ಬದಲಾಗಿ ಜನರಿಗೆ ಹತ್ತರ ವಿತ್ರ್ ರಾತ್ರಿಗಳಲ್ಲಿ ಲೈಲತುಲ್ ಕದ್ರ್ ಹುಡುಕಲು ಹೇಳುತ್ತಿದ್ದರು.(೪೮)

ಅಬೂಹುರೈರಾ(س) ವರದಿಮಾಡುತ್ತಾರೆ ಪ್ರವಾದಿ()ಹೇಳಿದರು-ನನಗೆ ಲೈಲತುಲ್ ಕದ್ರ್ ತೋರಿಸಲಾಗಿತ್ತು,ನನ್ನ ಮನೆಯವರು ನನ್ನನ್ನು ಎಬ್ಬಿಸಿದರು ಆಗ ನಾನು ಅದನ್ನು ಮರೆತುಬಿಟ್ಟೆ,ಆದ್ದರಿಂದ ನೀವು ಅದನ್ನು ಕೊನೆಯ ಹತ್ತರ ಬೆಸ ಸಂಖ್ಯೆಯ ರಾತ್ರಿಗಳಲ್ಲಿ ಹುಡುಕಿರಿ.(೪೯)

ಅಬ್ದುಲ್ಲಾ ಬಿನ್ ಅಬ್ಬಾಸ್(ب) ಹೇಳುತ್ತಾರೆ ಪ್ರವಾದಿ()ಹೇಳಿದರು-ಲೈಲತುಲ್ ಕದ್ರನ್ನು ರಮದಾನಿನ ಕೊನೆಯ ಹತ್ತರಲ್ಲಿ ಹುಡುಕಿರಿ,ಅಂದರೆ ೨೯,೨೭ ಮತ್ತು ೨೫ರ ರಾತ್ರಿಗಳಲ್ಲಿ.(೫೦)

ಅಬ್ದುಲ್ಲಾ ಬಿನ್ ಅಬ್ಬಾಸ್(ب) ಹೇಳುತ್ತಾರೆ ಪ್ರವಾದಿ()ಹೇಳಿದರು-ಲೈಲತುಲ್ ಕದ್ರ್ ಕೊನೆಯ ಹತ್ತು ರಾತ್ರಿಗಳಲ್ಲಿದೆ,ಆದ್ದರಿಂದ ಮುಂದಿನಿಂದ ೯ ಅಥವಾ ಹಿಂದಿನಿಂದ ೭ ರಾತ್ರಿಗಳಲ್ಲಿ ಹುಡುಕಿರಿ.(೫೧)

ಉಬಾದ ಬಿನ್ ಸಾಮಿತ್(س)ಹೇಳುತ್ತಾರೆ- ಪ್ರವಾದಿ()ಲೈಲತುಲ್ ಕದ್ರ್ ನ ಕುರಿತು ಹೇಳಲಿಕ್ಕೆ ಹೊರಟರು(೫೬)ಆಗ ಇಬ್ಬರು ಮುಸ್ಲಿಮರನ್ನು ಕಂಡು ನಾನು ನಿಮಗೆ  ಲೈಲತುಲ್ ಕದ್ರನ್ನು ತಿಳಿಸಲಿಕ್ಕೆ ಬಂದಿದ್ದೇನೆ,ಆ ಸಂಧರ್ಬದಲ್ಲಿ (ಫುಲಾಂ-ಫುಲಾಂ) ಅವನನ್ನು ಮತ್ತು ಅವನನ್ನು ಕಂಡೆ ಅದು ಅವರಿಗೆ ಒಳ್ಳೆಯದಾಗಲೆಂದು ಆಶಿಸುತ್ತೇನೆ, ನೀವದನ್ನು೨೯.೨೭ಮತ್ತು ೨೫ರಲ್ಲಿ ಹುಡುಕಿರಿ ಎಂದರು(೫೩)

ಅಬ್ದುಲ್ಲಾ ಬಿನ್ ಉಮರ್ ಪ್ರವಾದಿ()ರ ಸಂಗಡಿಗರಲ್ಲಿ ಕೆಲವರು ಲೈಲತುಲ್ ಕದ್ರನ್ನು  ಹಿಂದಿನಿಂದ ಏಳು ರಾತ್ರಿಗಳಲ್ಲಿ (ಸ್ವಪ್ನದಲ್ಲಿ) ಕಂಡರು ಆದ್ದರಿಂದ ಲೈಲತುಲ್ ಕದ್ರನ್ನು ಹುಡುಕುವವರು ಹಿಂದಿನ ೭ ದಿನಗಳಲ್ಲಿ ಹುಡುಕಲಿ.(೫೪)

ಅಬ್ದುಲ್ಲಾ ಬಿನ್ ಉನೈಸ್(س)ವರದಿಮಾಡುತ್ತಾರೆ ಪ್ರವಾದಿ()ಹೇಳುತ್ತಾರೆ-ಲೈಲತುಲ್ ಕದ್ರನ್ನು (ಸ್ವಪ್ನದಲ್ಲಿ)ಕಂಡೆ ಮತ್ತದನ್ನು ಮರೆಸಲ್ಪಟ್ಟೆ,ನನ್ನನ್ನು ಫ್ರಭಾತದಲ್ಲಿ ನೀರಿನಿಂದ ಬೆಂದ ನೆಲದಲ್ಲಿ ಸಜ್ದಾದ ಸ್ಥಿತಿಯಲ್ಲಿ ಕಂಡೆ,೨೩ನೇಯ ರಾತ್ರಿಯಲ್ಲಿ ಮಳೆಯಾಯಿತು ಪ್ರವಾದಿ()ರು ಫ್ರಭಾತದ ನಮಾಝ್ ನಿರ್ವಹಿಸಿದರು ಮರಳುವಾಗ ಅವರ ಹಣೆಯಲ್ಲಿ ಮತ್ತು ಮೂಗಿನ ಮೇಲೆ ಮಣ್ಣುನೀರಿನ ಕುರುಹುಗಳಿದ್ದವು.(೫೫)

ಉಐನ ಬಿನ್ ಅಬ್ದುರ್ರಹ್ಮಾನ್(س) ತಮ್ಮ ತಂದೆಯಿಂದ ವರದಿಮಾಡುತ್ತಾರೆ ಅವರು ಹೇಳುತ್ತಾರೆ-ನಾನು ಲೈಲತುಲ್ ಕದ್ರನ್ನು ಅಬೂಬಕ್ರರ ಮುಂದೆ ಪ್ರಸ್ತಾಪಿಸಿದೆ,ಅವರು ಹೇಳಿದರು ನಾನು ಪ್ರವಾದಿ() ಕೊನೆಯ ಹತ್ತರಲ್ಲಿ ಹುಡುಕಲು ಹೇಳಿದ್ದನ್ನು ಹುಡುಕುತ್ತಿದ್ದೇನೆ ಎಂದರು, ಆಗ ಇನ್ನೋರ್ವ ಸಹಾಬಿ ಹೇಳುತ್ತಾರೆ ನಾನು ಪ್ರವಾದಿ()ಕೊನೆಯ ೨೯ರಲ್ಲಿ ೨೭ ರಲ್ಲಿ ಮತ್ತು ೨೫ ರಲ್ಲಿ  ಅಥವಾ ೨೩ ರಲ್ಲಿ ಹುಡುಕಲು ಹೇಳಿದ್ದನ್ನು ಆಲಿಸಿದ್ದೇನೆಂದರು.ಅಬೂಬಕ್ರ(س)ಇಪ್ಪತ್ತನೆ ದಿವಸದ ನಮಾಝನ್ನು ಇನ್ನಿತರೆ ನಮಾಝಿನಂತೆ ನಿರ್ವಹಿಸಿದರು.ಕೊನೆಯ ಹತ್ತರಲ್ಲಿ ಪ್ರವೇಶಿಸಿದ ಬಳಿಕ ಶ್ರಮೀಸುತ್ತಿದ್ದರು.,(೫೬)

ಝರ್ರುಬ್ನು ಹುಬೈಶ್(س)ಉಬೈ ಬಿನ್ ಕಅಬ್(س)ರಿಗೆ ಇಬ್ನು ಮಸೂದ್ ರ ಹೇಳಿಕೆಯ ಕುರಿತು ಕೇಳಿದೆ,ಅವರು ಹೇಳುತ್ತಾರೆ ಯಾರು ವರ್ಷವಿಡಿ ಕಿಯಾಮ್ ಮಾಡುತ್ತಾರೆ ಅವರು ಲೈಲತುಲ್ ಕದ್ರನ್ನು ಪಡೆದಂತೆ.ಇಬ್ನು ಮಸೂದ್(س)ಗೆ ಆ ರಾತ್ರಿ ರಮದಾನಿನ ಕೊನೆಯ ಹತ್ತರದ್ದೆಂದು ಮತ್ತು ೨೭ ನೆಯದೆಂಬುದು ಗೊತ್ತಿತ್ತು.ತರುವಾಯ ಅವರು ೨೭ನೆಯ ರಾತ್ರಿಯನ್ನೆ ವೈಶಿಷ್ಠ್ಯವನ್ನಾಗಿಸಬಾರದೆಂದು ಆಣೆ ಹಾಕಿದರು ಹಾಗೂ ಜನರು ಅದರ ಮೆಲೆ ಭರವಸೆಮಾಡಬಾರದೆಂದು ಹೀಗೆ ಹೇಳಿದರು.ಓ ಅಬ್ದುರ್ರಹ್ಮಾನ್! ನೀವಿದನ್ನು ಯಾವ ಆಧಾರಗಳ ಮೇಲೆ ಹೇಳುತ್ತಿದ್ದಿರಿ?ಉತ್ತರ :ಸಂಕೇತಗಳಿಂದ,ಅಥವಾ ಪ್ರವಾದಿ ಹೇಳಿರುವ ಗುರುತುಗಳಿಂದ,ಅಂದು ಕಿರಣಗಳಿರುವುದಿಲ್ಲ.(೫೭)

ಅಬುಝರ್(س)ಹೇಳುತ್ತಾರೆ-ನಾವು ಪ್ರವಾದಿ()ರೊಂದಿಗೆ ರಮದಾನಿನ ಉಪವಾಸವ್ರತ ಆಚರಿಸಿದೆವು,ಪ್ರವಾದಿವರ್ಯರು  ಹಿಂದಿನಿಂದ ಏಳು ದಿನಗಳಿರೋವರೆಗೂ ಕಿಯಾಮ್ ಮಾಡಲಿಲ್ಲ,ತರುವಾಯ ನಮ್ಮೊಡನೆ ರಾತ್ರಿಯ ಮೂರನೆಯ ಜಾವದವರೆಗೆ ಕಿಯಾಮ್ ಮಾಡಿದರು.ಹಿಂದಿನಿಂದ ಆರನೆಯ ದಿನ ಕಿಯಾಮ್ ಮಾಡಲಿಲ್ಲ,ನಂತರದ ದಿನ ನಮ್ಮೊಡನೆ ರಾತ್ರಿಯ ಒಂದು ಭಾಗ ಕಿಯಾಮ್ ನಲ್ಲಿ ಕಳೆದರು,ನಾನು  ಪ್ರವಾದಿ()ಗೆ ವಿಚಾರಿಸಿದೆ ಓ ಸಂದೇಶವಾಹಕರೆ! ಈ ರಾತ್ರಿಯ ಕಿಯಾಮನ್ನು ನಫೀಲನ್ನಾಗಿ ಮಾಡಿದ್ದರೆ…. ಪ್ರವಾದಿ()ಇಮಾಮ್ ನೊಂದಿಗೆ ನಮಾಝ್ ನಿರ್ವಹಿಸಿದರೆ ಅದು ನಿರ್ವಹಿಸಿದಂತ ವ್ಯಕ್ತಿಗೆ  ಕಿಯಾಮುಲ್ಲೈಲ್ ನಂತಾಗುತ್ತದೆ.ವರದಿಗಾರ ಹೇಳುತ್ತಾರೆ:ಹಿಂದಿನಿಂದ ನಾಲ್ಕನೆಯ ರಾತ್ರಿ ಕಿಯಾಮ್ ಮಾಡಲಿಲ್ಲ,ತರುವಾಯ ಮೂರನೆಯ ದಿನ ತನ್ನ ಮಡದಿ-ಮಕ್ಕಳನ್ನು,ಜನರನ್ನು ಒಟ್ಟುಗೂಡಿಸಿದರು,ನಮ್ಮಿಂದ ಫಲಾಹ್(ಸಹರಿ)ಹೋಗುವುದೆಂದು ನಾವು ಭಯಪಟ್ಟೆವು.ವರದಿಗಾರ ಫಲಾಹ್ ಎಂದರೇನೆಂದು ವಿಚಾರಿಸಿದ?ಉತ್ತರ:ಸಹರಿ,ತದನಂತರ ತಿಂಗಳವಿಡಿ ನಮ್ಮೊಂದೆಗೆ ಕಿಯಾಮ್ ಮಾಡಲಿಲ್ಲ.(೫೮)

ಪ್ರವಾಸಿಗರಿಗಿರುವ ಬಿಡುವು

ಅಬ್ದುಲ್ಲಾ ಬಿನ್ ಅಬ್ಬಾಸ್(ب) ಹೇಳುತ್ತಾರೆ-ಪ್ರವಾದಿ()ರಮದಾನಿನಲ್ಲಿ ಉಪವಾಸದ ಸ್ಥಿತಿಯಲ್ಲೇ ಮಕ್ಕಾದೆಡೆಗೆ ಪ್ರವಾಸಿಸಿದರು ಕದೀದ್(೫೯) ನಲ್ಲಿ ಇಫ್ತಾರ್ ಮಾಡಿದರು,ಅವರೊಡನೆ ಜನರೂ ಸಹ ಇಫ್ತಾರ್ ಮಾಡಿದರು.(೬೦)

ಅಬೂದ್ದರ್ದಾ(س)ಹೇಳುತ್ತಾರೆ-ಬೇಸಿಗೆಯ ಕಾಲದಲ್ಲಿ ನಾವು ಪ್ರವಾದಿ()ರೊಂದಿಗೆ ಕೆಲ ಪ್ರವಾಸ ಕೈಗೊಂಡೆವು,ಬಿಸಿಲಿನಿಂದ ಉಳಿಯಲು ಜನರು ಕೈಗಳನ್ನು ತಲೆಯ ಮೇಲಿಟ್ಟರು,ಆಗ ಪ್ರವಾದಿ ಮುಹಮ್ಮದ್()ಮತ್ತು ಇಬ್ನು ರವಾಹ(س)ಇವರಿಬ್ಬರೇ ಉಪವಾಸವಿದ್ದರು.(೬೧)

ಅನಸ್ ಬಿನ್ ಮಾಲಿಕ್(س)ಹೇಳುತ್ತಾರೆ-ನಾವು  ಪ್ರವಾದಿ()ರೊಂದಿಗೆ ಪ್ರವಾಸಿಸುವಾಗ ಉಪವಾಸವಿದ್ದವನು ಉಪವಾಸವಿರದವನಿಗೆ ಮತ್ತು ಉಪವಾಸವಿರದವನು ಉಪವಾಸವಿದ್ದವನಿಗೆ ಏನು ಕ್ಷೋಭೆ ಮಾಡುತ್ತಿರಲಿಲ್ಲ.(೬೨)

ರಮದಾನ್ ತಿಂಗಳ ಶ್ರೇಷ್ಟತೆಯ ಮೇಲೆ ಬಹಳಷ್ಟು ಹದೀಸ್ ವರದಿಯಾಗಿವೆ,ಅದೇರೀತಿ  ಮೌದುಅ್ ಹದೀಸ್ ಗಳು ಸಹ ಇವೆ ಅದರಲ್ಲಿ ಕೆಲವು ಈ ಕೆಳಗಿನಂತಿವೆ:-

ಹದೀಸ್[ರಮದಾನ್ ಎನ್ನಬೇಡಿ ಎಕೆಂದರೆ ಅದು ಅಲ್ಲಾಹನ ನಾಮಗಳಾಲ್ಲೊಂದಾಗಿದೆ.ಬದಲಾಗಿ ರಮದಾನ್ ತಿಂಗಳೆಂದು ಹೇಳಿ].(೬೩)ಹದೀಸ್[ರಮದಾನಿನ ಮೊದಲ ರಾತ್ರಿಯಲ್ಲಿ ಸ್ವರ್ಗೋದ್ಯಾನಗಳ ಕಾಝಿನ್ ಓ ಗೊಟ್ಟು ಹೇಳುವನು:ಲಬ್ಬೈಕ್ ವ ಸಾದೈಕ್….ಅದರೊಳಗೆ  ಸ್ವರ್ಗದ ಬಾಗಿಲುಗಳನ್ನು ತೆರೆಯಲು ಮತ್ತು ನರಕದ ಬಾಗಿಲುಗಳನ್ನು ಮುಚ್ಚಲು ದೇವನು ಆದೇಶಿಸಿದನು].(೬೪) ಹದೀಸ್-[ರಮದಾನಿನಲ್ಲಿರುವುದನ್ನು ಭಕ್ತರು ಅರಿತರೆ ನನ್ನ ಉಮ್ಮತ್ ವರ್ಷವಿಡಿ ರಮದಾನ್ ಇರಲೆಂದು ಆಶಿಸುವುದು](೬೫) ಹದೀಸ್-[ರಮದಾನಿನ ಮೊದಲ ರಾತ್ರಿಯಲ್ಲಿ ಅಲ್ಲಾಹನು ತನ್ನ ಉಪವಾಸ ಆಚರಿಸುವ ಸೃಷ್ಟಿಯೆಡೆಗೆ  ಕರುಣೆಯ ದೃಷ್ಟಿಹಾಯಿಸಿದ,ಮತ್ತು ಯಾರ ಮೇಲೆ ಅಲ್ಲಾಹನ ಕರುಣೆವಿದೆಯೋ ಅವರಿಗೆ ಶಿಕ್ಷೆ ನೀಡುವುದಿಲ್ಲ..](೬೬) ಹದೀಸ್-[ಅಲ್ಲಾಹನು ರಮದಾನಿನ ಮೊದಲ ದಿನದಲ್ಲಿ ಪ್ರತಿಯೊಬ್ಬ ಮುಸ್ಲಿಮನ ಪಾಪಗಳನ್ನು ಕ್ಷಮೀಸುತ್ತಾನೆ..](೬೭) ಹದೀಸ್-[ಅಲ್ಲಾಹನು ರಮದಾನಿನ ಪ್ರತಿದಿನ ಇಫ್ತಾರಿನ ಸಮಯದಲ್ಲಿ ಸಾವಿರಾರು ನರಕವಾಸಿಗಳಿಗೆ ಸ್ವತಂತ್ರಗೋಳಿಸುತ್ತಾನೆ.](೬೮) ಹದೀಸ್-[ಅಲ್ಲಾಹನು ಆಕಾಶ ಮತ್ತು ಭೂಮಿಯ ನಿವಾಸಿಗಳಿಗೆ ಮಾತನಾಡುವ ಅವಕಾಶಕೊಟ್ಟರೆ ಅವರು ರಮದಾನಿನ ಉಪವಾಸಗಳ ಫ್ರತಿಫಲವಾಗಿ ಸ್ವರ್ಗದ ಸುವಾರ್ತೆ ನೀಡುವರು](೬೯) ಹದೀಸ್-[ಜುಮಾ ಸರಿಯಾಗಿದ್ದರೆ ಉಳಿದ ದಿನಗಳೆಲ್ಲಾ ಸರಿಯಾಗಿದ್ದಂತೆ,ಮತ್ತು ರಮದಾನ್ ಸರಿಯಾಗಿದ್ದರೆ  ವರ್ಷವಿಡಿ ಸರಿಯಾಗಿದ್ದಂತೆ](೭೦) ಹದೀಸ್-[ರಮದಾನಿನಲ್ಲಿ ಯಾರು ಒಂದು ದಿನದ ಉಪವಾಸ ತೊರೆಯುತ್ತಾರೋ ಅವರು ನಿರ್ಗತಿಕರಿಗೆ ೩೦ ಸಾಅ್ ಖರ್ಜೂರ ಉಣಿಸಲಿ](೭೧) ಹದೀಸ್-[ಯಾರು ಕಾರಣವಿಲ್ಲದೆ ಉಪವಾಸ ಬಿಡುತ್ತಾರೋ ಅವರು ಒಂದು ದಿನದ ಬದಲಿಗೆ ೩೦ ದಿನದ ಉಪವಾಸ,ಎರಡು ದಿನದ ಬದಲಿಗೆ ೬೦ ದಿನದ ಉಪವಾಸ ಮತ್ತು ಮೂರು ದಿನದ ಬದಲಿಗೆ ೯೦ ದಿನದ ಉಪವಾಸ ಆಚರಿಸಲಿ](೭೨) ಹದೀಸ್-[ರಜಬ್ ತಿಂಗಳು ಅಲ್ಲಾಹನ ತಿಂಗಳು,ಶಾಬಾನ್ ತಿಂಗಳು ನನ್ನ ಮೆಚ್ಚಿನ ಮಾಸ ಮತ್ತು ರಮದಾನ್ ತಿಂಗಳು ನನ್ನ ಉಮ್ಮತೀಗಳ ತಿಂಗಳು,](೭೩)  ಹದೀಸ್-[ಯಾರು ರಮದಾನಿನ ಕೊನೆಯ ಜುಮಾದಂದು ಐದು ಹೊತ್ತಿನ ಕಡ್ಡಾಯ ನಮಾಝ್ ನಿರ್ವಹಿಸುವರೋ ಅವರ ವರ್ಷವಿಡಿ ಕೊಂದು-ಕೊರತೆಯಾದ ನಮಾಝ್ ಗಳು ಕಝಾ ಆದಂತೆ](೭೪) ಇದೆರೀತಿ ಬಹಳಷ್ಟು ಮಿಥ್ಯ ಅಹಾದೀಸ್ ಗಳಿವೆ..

– والله أعلم –

 

ಉಲ್ಲೇಖಗಳು


[1]
– رواه البخاري في صحيحه المطبوع مع فتح الباري(1/49) ، كتاب الإيمان ، حديث رقم (8) . ورواه مسلم في صحيحه (1/45) ، كتاب الإيمان ، حديث رقم(16) . وفي رواية مسلم تقديم صوم رمضان على الحج ، فقال رجل : الحج وصيام رمضان ؟ قال – ابن عمر – :لا .صيام رمضان والحج هكذا سمعته من رسول الله صلى الله عليه وسلم

[2]– سورة لقمان:34.

[3]– رواه البخاري في صحيحه المطبوع مع فتح الباري(1/114) ، كتاب الإيمان ، حديث رقم (50) . ورواه مسلم في صحيحه (1/39) ، كتاب الإيمان ، حديث رقم(9) .

[4]– رواه البخاري في صحيحه المطبوع مع فتح الباري(4/102) ، كتاب الصوم ، حديث رقم (1891) . ورواه مسلم في صحيحه (1/40، 41) ، كتاب الإيمان ، حديث رقم(11) ، (9،8) .

[5]– رواه البخاري في صحيحه المطبوع مع فتح الباري(1/129)،كتاب الإيمان،حديث رقم (53).ورواه مسلم في صحيحه(1/47، 48)،كتاب الإيمان،حديث رقم(17)،(24)

[6]– رواه أحمد في مسنده (3/143) . ورواه مسلم في صحيحه(1/41، 42)،كتاب الإيمان،حديث رقم(12) . ورواه النسائي في سننه (4/120-122) كتاب الصيام ، باب وجوب الصوم . ورواه ابن حبان في صحيحه (1/316، 317) كتاب الإيمان ، حديث رقم (155) .

[7]-هي قبيلة من أشهر قبائل العرب وأقواها ، شرَّفها الله ببعث النبي صلى الله عليه وسلم منهم ، قال – عليه السلام – : (( إن الله اصطفى كنانة من ولد إسماعيل ، واصطفى قريشاً من كنانة ، واصطفى من قريش بني هاشم ، واصطفاني من بني هاشم )) [رواه مسلم (4/1782) حديث رقم (2276) ].

واختلف العلماء في سبب تسميتهم بهذا الاسم على أقوال كثيرة : قيل نسبة إلى قريش بن بدر بن يخلد بن الحارث بن يخلد بن النضر بن كنانة . وقيل : نسبة إلى النضر بن كنانة سمي قريشاً لوصف قومه له بأنه كالحمل القريش – الشديد – . وقيل : نسبة إلى دابة بالبحر تأكل دواب البحر تدعي القرش ، وقيل : إن النظر بن كنانة كان يقرش عن حاجة الناس فيسدها بماله ، والتقريش : التفتيش ، وقيل : نسبة إلى التقرش وهو التكسب والتجارة ، وقيل : نسبة إلى التقرش وهو التجمع .

والراجح- والله أعلم-أن قريش هو النضر بن كنانة ، فما كان من ولده فهو قرشي ، ومن ليس بولده فليس بقرشي . يُراجع : تاريخ الطبري (2/263-265) ، والبداية والنهاية (2/ 218- 229)  .

[8]– رواه البخاري في صحيحه المطبوع مع فتح الباري (4/102) كتاب الصوم، حديث رقم (1893)، ورواه مسلم في صحيحه (2/792) كتاب الصيام ، حديث رقم (1125). (116) .

[9]– سورة البقرة: الآية184.

[10]– رواه البخاري في صحيحه المطبوع مع فتح الباري (8/181) كتاب التفسير، حديث رقم (4507)، ورواه مسلم في صحيحه(2/802)كتاب الصيام ،حديث رقم (1145).

[11]– سورة البقرة: الآية185.

[12]– رواه مسلم في صحيحه(2/802)كتاب الصيام ،حديث رقم (1145) ، (15) . ورواه ابن خزيمة في صحيحه (3/200)كتاب الصيام ، حديث رقم (1903) ورواه الحاكم في مستدركه (1/423) كتاب الصوم . قال : هذا حديث صحيح على شرط الشيخين ، ووافقه الذهبي في تلخيصه .

[13]– رواه البخاري في صحيحه المطبوع مع فتح الباري (4/112) كتاب الصوم، حديث رقم (1898،1899)، ورواه مسلم في صحيحه (2/758) كتاب الصيام ، حديث رقم (1079). (2،1) ، بزيادة في الرواية الأولى ، وفي الرواية الثانية (( فتحت أبواب الرحمة )) .

[14]-. رواه البخاري في صحيحه المطبوع مع فتح الباري (4/215) كتاب الصوم،حديث رقم(1971) . ورواه مسلم في صحيحه(2/811) كتاب الصيام،حديث رقم (1157) .

[15]– رواه البخاري في صحيحه المطبوع مع فتح الباري (4/213) كتاب الصوم،حديث رقم(1969) . ورواه مسلم في صحيحه(2/810) كتاب الصيام،حديث رقم (1156) (175) .

[16]– رواه مسلم في صحيحه(2/809، 810)كتاب الصيام ،حديث رقم (1156) ، (15) . ورواه الترمذي في سننه (2/133، 134) ، أبواب الصوم حديث رقم (765) . وقال حديث حسن صحيح .ورواه ابن خزيمة في صحيحه (3/304، 305)أبواب صوم التطوع ، حديث رقم (2132) .

[17]– رواه مسلم في صحيحه(2/810)كتاب الصوم ،حديث رقم (1156) ، (174) . ورواه الإمام أحمد في مسنده (6/157) .

[18]– رواه الإمام أحمد في مسنده (2/400) . ورواه مسلم في صحيحه (1/209) كتاب الطهارة،حديث رقم (233) ، (16) .

[19]– رواه الترمذي في سننه (2/95، 96) ، أبواب الصوم حديث رقم (677) . وقال : حديث غريب .ورواه ابن خزيمة في صحيحه (3/188)أبواب فضائل شهر رمضان  ، حديث رقم (1883) .ورواه ابن ماجه في سننه (1/526) كتاب الصوم ، رقم الحديث (1642) ، ورواه الحاكم في المستدرك ( 1/421) ، وقال : هذا حديث صحيح على شرط الشيخين ولم يخرجاه بهذه السياقة ، وقال الذهبي في تلخيصه : لم يخرجاه بهذه السياقة .

[20]– رواه البخاري في صحيحه المطبوع مع فتح الباري (4/124) كتاب الصوم،حديث رقم(1912) . ورواه مسلم في صحيحه (2/766) كتاب الصيام،حديث رقم (1089) .

[21]– رواه الإمام أحمد في مسنده (2/230) . ورواه النسائي (4/129) كتاب الصيام ، وذكره المنذري في الترغيب والترهيب (2 /98) . وقال : رواه النسائي والبيهقي وكلاهما عن أبي هريرة ، ولم يسمع منه فيما أعلم .

[22]– رواه البخاري في صحيحه المطبوع مع فتح الباري(4/127، 128)كتاب الصوم،حديث رقم(1914)ورواه مسلم في صحيحه(2/762)كتاب الصيام،حديث رقم (1082)

[23]– رواه البخاري في صحيحه المطبوع مع فتح الباري (4/115) ، كتاب الصوم ، حديث رقم (1901) .ورواه مسلم في صحيحه (1/524،523) ، كتاب صلاة المسافرين ، حديث رقم (760) .

[24]– رواه البخاري في صحيحه المطبوع مع فتح الباري (1/92) ، كتاب الصوم، حديث رقم (37) .ورواه مسلم في صحيحه (1/523) ، كتاب صلاة المسافرين ، حديث رقم (759) .

[25]– رواه البخاري في صحيحه المطبوع مع فتح الباري (3/261) ،كتاب الزكاة، حديث رقم (1397) .ورواه مسلم في صحيحه (1/44) ، كتاب الإيمان ، حديث رقم (14) .

[26]– رواه أحمد في مسنده ( 5/297) . ورواه مسلم في صحيحه (3/818، 819) كتاب الصيام ، حديث رقم (1162) . ورواه أبو داود في سننه (3/ 807، 808) كتاب الصوم ، حديث رقم ( 2425) . ورواه النسائي في سننه (4/209)كتاب الصيام ، باب صوم ثلثي الدهر ..ورواه ابن خزيمة في صحيحه (3/ 301)  كتاب الصيام، حديث رقم (2126) ، مختصراً.

[27]-رواه أحمد في مسنده (5/417) ،. ورواه مسلم في صحيحه (2/822) كتاب الصيام ، حديث رقم (1164) . ورواه أبو داود في سننه (2/812، 813) كتاب الصوم ، حديث رقم (2433) ، ورواه الترمذي في سننه (4/129، 130) ، أبواب الصوم ، حديث رقم (756) .وقال :حديث حسن صحيح . ورواه ابن ماجه في سننه (1/547) كتاب الصيام ، حديث رقم (1716) .

[28]– رواه الإمام أحمد في مسنده ( 2/ 303) . ورواه مسلم في صحيحه (3/821) كتاب الصيام ، حديث رقم (1163) . ورواه أبو داود في سننه (2/ 811) كتاب الصوم ، حديث رقم ( 2429) . ورواه الترمذي في سننه مختصراً (2/12) أبواب الصوم ، حديث رقم (737) .وقال : حديث حسن . ورواه النسائي في سننه (3/206، 207)كتاب قيام الليل .باب فضل صلاة الليل. ورواه ابن خزيمة في صحيحه (3/281) أبواب صوم التطوع ، حديث رقم (2076) .

[29]– رواه الإمام أحمد في مسنده ( 2/ 254) . ورواه الترمذي في سننه (5/210) أبواب الدعوات ، حديث رقم (3613) . وقال : حديث حسن غريب ، واللفظ له . ورواه ابن خزيمة في صحيحه (3/192، 193) حديث رقم (1888) .ورواه الحاكم في المستدرك (4/ 153، 154) كتاب البر والصلة ، عن كعب بن عجرة بلفظ آخر ، وقال : هذا حديث صحيح الإسناد ولم يخرجاه ، ووافقه الذهبي في تلخيصه .

[30]– رواه الإمام أحمد في مسنده ( 2/ 335) . ورواه البخاري في صحيحه المطبوع مع فتح الباري (6/11) كتاب الجهاد ، حديث رقم (2790).

[31]– رواه البخاري في صحيحه المطبوع مع فتح الباري(4/116) كتاب الصوم، حديث رقم (1902).ورواه مسلم في صحيحه(2/1803) كتاب الفضائل، حديث رقم(2308)

[32]– النواضح : الأبل التي يستقى عليها ، وأحدهما : ناضح . يراجع : النهاية في غريب الحديث والآثر (5/69) ، باب النون مع الضاد .

[33]– تقضي بمعنى تعدل ، ورواية مسلم لهذا الحديث بهذا اللفظ (( فإن عمرة فيه تعدل حجة )) .

[34]– رواه البخاري في صحيحه المطبوع مع فتح الباري(4/73،72)كتاب جزاء الصيد،حديث رقم(1863).ورواه مسلم في صحيحه(1/44)كتاب الحج،حديث رقم (1256)

[35]– رواه الإمام أحمد في مسنده ( 5/ 231) . ورواه الترمذي في سننه (4/124، 125) أبواب الإيمان  ، حديث رقم (2749) . وقال : حديث حسن صحيح ،ورواه ابن ماجه في سننه (2/1314، 1315) كتاب الفتن ، حديث رقم (3973) . ورواه الحاكم في مستدركه (2/ 76) كتاب الجهاد ، وقال : هذا حديث صحيح على شرط الشيخين ولم يخرجاه ، ووافقه الذهبي في تلخيصه .

[36]– رواه البخاري في صحيحه المطبوع مع فتح الباري(3/10) كتاب التهجد ، حديث(1129) ورواه مسلم في صحيحه( 1/524) كتاب صلاة المسافرين، حديث رقم (761)

[37]– رواه البخاري في صحيحه المطبوع مع فتح الباري (4/250،251) كتاب صلاة التراويح ، حديث (2012) ورواه مسلم في صحيحه( 1/524) ، كتاب صلاة المسافرين ، حديث رقم (761) (178) .

[38]– رواه البخاري في صحيحه المطبوع مع فتح الباري (4/251) كتاب صلاة التراويح ، حديث (2012)ورواه مسلم في صحيحه( 1/509) ،كتاب صلاة المسافرين، حديث رقم (738).

[39]– رواه مالك في الموطأ (1/114، 115) كتاب الصلاة في رمضان ، حديث رقم (3) . ورواه البخاري في صحيحه المطبوع مع فتح الباري(4/250) كتاب صلاة التراويح ، حديث (2010) . ورواه البيهقي في سننه (2/493) كتاب الصلاة ، باب قيام شهر رمضان .

[40]– رواه البخاري في صحيحه المطبوع مع فتح الباري (4/269) كتاب فضل ليلة القدر ، حديث (2024) ورواه مسلم في صحيحه( 2/832) ، كتاب الاعتكاف ، حديث رقم (1174).

[41]– رواه الإمام أحمد في مسنده ( 6/ 82) . ورواه مسلم في صحيحه (2/832) كتاب الاعتكاف، حديث رقم (1175) . ورواه الترمذي في سننه (2/146) أبواب الصوم ، حديث رقم (793) .وقال : هذا حديث غريب حسن صحيح. ورواه أبن ماجه في سننه (1/ 562) كتاب الصيام ، حديث رقم ( 1767) . ورواه ابن خزيمة في صحيحه (3/342) كتاب الصيام ، حديث رقم (2215) .

[42]– رواه البخاري في صحيحه المطبوع مع فتح الباري (2/298) كتاب الأذان ، حديث (813) ورواه مسلم في صحيحه( 2/824) ، كتاب الصيام ، حديث رقم (1164).

[43]– رواه البخاري في صحيحه المطبوع مع فتح الباري (4/271) كتاب الاعتكاف ، حديث رقم (2026) . ورواه مسلم في صحيحه (2/831) كتاب الاعتكاف ، حديث رقم (1172)(5).

[44]– رواه البخاري في صحيحه المطبوع مع فتح الباري (4/271) كتاب الاعتكاف ، حديث رقم (2025) . ورواه مسلم في صحيحه (2/830) كتاب الاعتكاف ، حديث رقم (1171) .

[45]– رواه الإمام أحمد في مسنده ( 2/ 336) .ورواه البخاري في صحيحه المطبوع مع فتح الباري (4/284) كتاب الاعتكاف ، حديث رقم (2044) . ورواه أبو داود في سننه (2/832) كتاب الصوم، حديث رقم (2466) . ورواه أبن ماجه في سننه(1/ 562) كتاب الصيام ، حديث رقم( 1769) .وزاد فيه ( وكان يعرض عليه القرآن في كل عام مرة ، فلما كان العام الذي قبض فيه عرض عليه مرتين )  ورواه الدارمي في سننه (2/27) كتاب الصيام ، باب اعتكاف النبي صلى الله عليه وسلم .ورواه ابن خزيمة في صحيحه (3/344) أبواب الاعتكاف ، حديث رقم (2221) .

-[46]  رواه الإمام أحمد في مسنده ( 5/ 141) . ورواه أبو داود في سننه(2/830) كتاب الصوم، حديث رقم (2463) . ورواه الترمذي في سننه (2/148) أبواب الصوم ، حديث رقم (800) .عن أنس بن مالك ،قال : هذا حديث غريب حسن صحيح. ورواه أبن ماجه في سننه(1/ 562) كتاب الصيام ، حديث رقم( 1770) . ورواه الحاكم في المستدرك (1/ 439) كتاب الصوم ، عن أنس بن مالك ، وقال : هذا حديث صحيح على شرط الشيخين ولم يخرجاه ،ووافقه الذهبي في تلخيصه .وذكر حديث أبي بن كعب كشاهد وحكم عليه بالصحة . ووافقه الذهبي .

[47]– رواه البخاري في صحيحه المطبوع مع فتح الباري (4/259) كتاب فضل ليلة القدر  ، حديث رقم (2017) . ورواه مسلم في صحيحه (2/828) كتاب الصيام ، حديث رقم (1169) .

[48]– رواه البخاري في صحيحه المطبوع مع فتح الباري (4/259) كتاب فضل ليلة القدر  ، حديث رقم (2020).

[49]– رواه مسلم في صحيحه(2/824)كتاب الصيام ،حديث رقم (1166) . ورواه الدارمي في سننه (2/28) ، كتاب الصيام ، باب في ليلة القدر . ورواه ابن خزيمة في صحيحه (3/333) ، حديث رقم (2119) .

[50]– رواه الإمام أحمد في مسنده ( 1/ 297) . ورواه البخاري في صحيحه المطبوع مع فتح الباري (4/260) كتاب فضل ليلة القدر ، حديث رقم (2021) . ورواه أبو داود في سنه (1 / 108، 109) كتاب الصلاة ، حديث رقم (1381) .

[51]– رواه الإمام أحمد في مسنده ( 1/ 281) .وفيه (( في سبع يمضين أو سبه يبقين ورواه البخاري في صحيحه المطبوع مع فتح الباري (4/260) كتاب فضل ليلة القدر ، حديث رقم (2022) . واللفظ له

[52]– الملاحاة  : التشاجر ورفع الأصوات ، والمراجعة بالقول الذي لا يصلح على حال الغضب . يراجع : التمهيد لابن عبد البر ( 2/201) .

[53]– رواه مالك في الموطأ (1/320) كتاب الاعتكاف ،حديث رقم (13) عن أنس بن مالك ، قال ابن عبد البر في التمهيد (2/200) . هكذا روى ابن مالك هذا الحديث لا خلاف عنه في إسناده ومتنه ……… وإنما الحديث لأنس عن عبادة بن الصامت .ا.هـ . رواه البخاري في صحيحه المطبوع مع فتح الباري (4/267) كتاب فضل ليلة القدر  ، حديث رقم (2023) واللفظ له. ورواه الدارمي في سننه (2/27،28) ، كتاب الصيام ، باب في ليلة القدر . ورواه ابن خزيمة في صحيحه (3/334) ، حديث رقم (2198) .

[54]– رواه البخاري في صحيحه المطبوع مع فتح الباري (4/256) كتاب فضل ليلة القدر ، حديث رقم (2015) . ورواه مسلم في صحيحه (2/822، 823) كتاب الصيام ، حديث رقم (1165) .

[55]– رواه الإمام أحمد في مسنده ( 3/ 495) . ورواه مسلم في صحيحه (2/827) كتاب الصيام ، حديث رقم (1168) . ورواه ابن خزيمة في صحيحه (3/328) ، حديث رقم (2185، 2186) بلفظ آخر .

[56]– رواه الترمذي في سننه (2/145) أبواب الصوم ، حديث رقم (791) . وقال : هذا حديث حسن صحيح . ورواه ابن خزيمة في صحيحه (3/324) ، حديث رقم (2175) ورواه الحاكم في المستدرك (1/438) كتاب الصوم : هذا حديث صحيح الإسناد ولم يخرجاه ووافقه الذهبي في تلخيصه .

[57]– رواه الإمام أحمد في مسنده ( 5/ 130، 131) . ورواه مسلم في صحيحه (2/828) كتاب الصيام ، حديث رقم (762) واللفظ له . ورواه أبو داود في سنه (2 / 106، 107) كتاب الصلاة ، حديث رقم (1378) . رواه الترمذي في سننه (2/145) أبواب الصوم ، حديث رقم (790) . وقال : هذا حديث حسن صحيح . ورواه ابن خزيمة في صحيحه (3/332) ، حديث رقم (2193).

[58]– رواه الإمام أحمد في مسنده ( 5/ 159، 160) . بلفظ آخر . ورواه أبو داود في سننه (2 / 105) كتاب الصلاة ، حديث رقم (1375) .واللفظ له . ورواه الترمذي في سننه (2/150) أبواب الصوم ، حديث رقم (803) . وقال : هذا حديث حسن صحيح . ورواه النسائي في سننه (3/202، 203) باب قيام شهر رمضان .ورواه ابن ماجه (1/26،27) باب في فضل قيام شهر رمضان  .ورواه ابن خزيمة في صحيحه (3/337، 338) ، حديث رقم (2206).

[59]– الكديد : موضع بالحجاز ، ويوم الكديد من أيام العرب ، وهو : موضع على اثنين وأربعين ميلاً من مكة . يراجع : معجم البلدان (4/442) .

[60]– رواه البخاري في صحيحه المطبوع مع فتح الباري (4/180) كتاب الصوم ، حديث رقم (1944) . ورواه مسلم في صحيحه (2/784) كتاب الصيام ، حديث رقم (1113) . وفيه زيادة : ( وكان صحابة رسول الله صلى الله عليه وسلم يتبعون الأحدث فالأحدث من أمره ) .

[61]– رواه البخاري في صحيحه المطبوع مع فتح الباري (4/182) كتاب الصوم ، حديث رقم (1945) . ورواه مسلم في صحيحه (2/790) كتاب الصيام ، حديث رقم (1122) . وفيه : ( خرجنا مع رسول الله صلى الله عليه وسلم في شهر رمضان في حر شديد ) .

[62]– رواه البخاري في صحيحه المطبوع مع فتح الباري (4/186) كتاب الصوم ، حديث رقم (1947) . ورواه مسلم في صحيحه (2/787) كتاب الصيام ، حديث رقم (1118) . ولفظه : ( سافرنا مع رسول الله صلى الله عليه وسلم في رمضان ………. ) الحديث .

[63]– حكم عليه بالوضع : ابن الجوزي في الموضوعات (2/187) . والسيوطي في اللآليء (22/97) . والشوكاني في الفوائد المجموعة ص(87) ، حديث رقم (251) .

[64]– حكم عليه بالوضع : ابن الجوزي في الموضوعات (2/187) . والسيوطي في اللآليء (22/98، 99) . والشوكاني في الفوائد المجموعة ص(87) ، حديث رقم (253) .

[65]– حكم عليه بالوضع : ابن الجوزي في الموضوعات(2/189،188).والسيوطي في اللآليء(22/99،100).والشوكاني في الفوائد المجموعة ص(88)،حديث رقم (254).

[66]– حكم عليه بالوضع : ابن الجوزي في الموضوعات(2/189،190) .والسيوطي في اللآليء (2/100) . والشوكاني في الفوائد المجموعة ص (88) ، حديث رقم (255).

[67]– حكم عليه بالوضع : ابن الجوزي في الموضوعات(2/190) .والسيوطي في اللآليء (2/101) . والشوكاني في الفوائد المجموعة ص (88) ، حديث رقم (256).

[68]– حكم عليه بالوضع : ابن الجوزي في الموضوعات(2/191) .والسيوطي في اللآليء (2/101) . والشوكاني في الفوائد المجموعة ص (89) ، حديث رقم (257).

[69]– حكم عليه بالوضع : ابن الجوزي في الموضوعات(2/191،192) .والسيوطي في اللآليء (2/103) . والشوكاني في الفوائد المجموعة ص (90) ، حديث رقم (258).

[70]– حكم عليه بالوضع : ابن الجوزي في الموضوعات(2/196) .والسيوطي في اللآليء (2/106) . والشوكاني في الفوائد المجموعة ص (94) ، حديث رقم (275).

[71]– حكم عليه بالوضع : ابن الجوزي في الموضوعات(2/191،192) .والسيوطي في اللآليء (2/103) . والشوكاني في الفوائد المجموعة ص (90) ، حديث رقم (258).

[72]– حكم عليه بالوضع : ابن الجوزي في الموضوعات(2/196) .والسيوطي في اللآليء (2/106) . والشوكاني في الفوائد المجموعة ص (95،94) ، حديث رقم (276).

[73]– حكم عليه بالوضع : ابن الجوزي في الموضوعات(2/205) .والصغاني في الموضوعات ص (61)، حديث رقم (129) وابن قيم الجوزية في المنار المنيف ص(95) ، رقم (168) والسيوطي في اللآليء (2/114) .

[74]– حكم عليه بالوضع : الشوكاني في الفوائد المجموعة ص (54) ، حديث رقم (75).

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s