(ಅಲೈಹಿಸ್ಸಲಾಮು) ಅವರ ಮೇಲೆ ಶಾಂತಿ ವರ್ಷಿಸಲಿ

 ಕಿರು ಪರಿಚಯ:

ಅಲೈಹಿಸ್ಸಲಾಮಿನ ಅರ್ಥ ಅವರ ಮೇಲೆ ಅಲ್ಲಾಹನ ಶಾಂತಿ ವರ್ಷಿಸಲಿ, ಇದೊಂದು ಪ್ರಾರ್ಥನೆ, ಅಂಬಿಯಾಗಳ ಹಕ್ಕಿನಲ್ಲಿ ಹೇಳಲಾಗುತ್ತದೆ, ಒಡಂಬಡಿಕೆಯಿಂದ ನಡೆದುಬಂದಂತಹ ಪದವಿದು.

ಪರಿವಿಡಿ:

  • ಕುರ್ ಆನಿನಿಂದ
  • ಹದೀಸ್ ಗ್ರಂಥಗಳಿಂದ
  • ಉಲಮಾಗಳ ಹೇಳಿಕೆ

ಕುರ್ಆನಿನಿಂದ:

ಅಲೈಹಿಸ್ಸಲಾಮು” ಈ ಪದವು ಅಂಬಿಯಾಗಳ ಹಕ್ಕಿನಲ್ಲಿ ಹೇಳಲ್ಪಡುತ್ತದೆ,ವಿಶೇಶವಾಗಿ ನಮ್ಮ ಪ್ರವಾದಿಯ ಹಕ್ಕಲ್ಲಿ ಪರಿಪೂರ್ಣವಾದದ್ದು “ಅಲೈಹಿಸ್ಸಲಾತು ವ ಸ್ಸಲಾಮು” ಇದು ಅಲ್ಲಾಹನ ಆದೇಶವಾಗಿರುತ್ತದೆ. ಅಲ್ಲಾಹನು ಹೇಳುತ್ತಾನೆ:

يَا أَيُّهَا الَّذِينَ آمَنُوا صَلُّوا عَلَيْهِ وَسَلِّمُوا تَسْلِيماً [الأحزاب: 56].

ಓ ಸತ್ಯ ವಿಶ್ವಾಸಿಗಳೇ ನೀವು ಅವರ ಮೇಲೆ ಶಾಂತಿಗಾಗಿ ಮತ್ತು ಕರುಣೆಗಾಗಿ ಪ್ರಾರ್ಥಿಸಿರಿ. ಇದಕ್ಕೆ ಮೂಲವಾಗಿ ಅಲ್ಲಾಹನ ಈ ವಾಣಿ : ” سلام على نوح في العالمين ” ಅಂದರೆ” ನೂಹರ ಮೇಲೆ ಸಕಲ ವಿಶ್ವಗಳಲ್ಲಿ ಶಾಂತಿ ನೆಲೆಸಲಿ”. ಮತ್ತು ಅಲ್ಲಾಹನು ಹೇಳುವನು :”  ” سلام على موسى وهارون ” ಅಂದರೆ “ಮೂಸಾ ಮತ್ತು ಹಾರುನರ ಮೇಲೆ ಶಾಂತಿ ನೆಲೆಸಲಿ”. ಇನ್ನೊಂದೆಡೆ ಅಲ್ಲಾಹನು ಹೇಳುವನು : ” سلام على أل   ياسين ”  ಯಾಸೀನರ ಸಂತತಿಯ ಮೇಲೆ ಶಾಂತಿ ವರ್ಷಿಸಲಿ”.

ಸಂದೇಶವಾಹಕರೊಂದಿಗೆ ಅವರ ಸಂತತಿ ಮತ್ತು ಅವರ ಸಹಪಾಠಿಗಳನ್ನು ಸೇರಿಸಿ ಶಾಂತಿಗಾಗಿ ಪ್ರಾರ್ತಿಸುವುದು ಧರ್ಮಸಮ್ಮತವಾಗಿರುತ್ತದೆ.ಕೇವಲ ಅವರ ಸಂತತಿಗಾಗಿ ಮಾತ್ರ ನೆಬಿಯವರನ್ನು ಹೊರತುಪಡಿಸಿ ಪ್ರಾರ್ಥಿಸುವುದು ಸರಿಯಾಗಿರುವುದಿಲ್ಲ.

ಎಲ್ಲಾ ಸಂದೇಶವಾಹಕರು ಏಕದೇವತ್ವದೆಡೆಗೆ ಆಹ್ವಾನಿಸಿದರು. ಅಲ್ಲಾಹನು ಹೇಳುವನು:

وَمَا أَرْسَلْنَا مِنْ قَبْلِكَ مِنْ رَسُولٍ إِلاَّ نُوحِي إِلَيْهِ أَنَّهُ لا إِلَهَ إِلاَّ أَنَا فَاعْبُدُونِ

ಅರ್ಥ: “ನಿಮಗಿಂತ ಮುಂಚೆ ನಾವು ನಿಯೋಜಿಸಿದ್ದ ಪ್ರತಿಯೊಬ್ಬ ನೆಬಿಯೆಡೆಗೆ ನಾವು, ನನ್ನ ಹೊರತು ಬೇರೊಬ್ಬ ದೇವನಿಲ್ಲ ನೀವು ನನ್ನ ಆರಾಧನೆಯೆ ಮಾಡಿ ಎಂದು ಅವತೀರ್ಣ ಮಾಡಿದ್ದೆವು”.

ಹದೀಸ್ ಗ್ರಂಥಗಳಿಂದ:

ಪ್ರವಾದಿಗಳಿಂದ ಈ ಪದವು ಕೆಲ ಸಂದೇಶವಾಹಕರುಗಳಲ್ಲಿ ವ್ಯಕ್ತವಾಗಿದೆ.

ಪ್ರವಾದಿ ಸಲ್ಲಲ್ಲಾಹು ಅಲೈಹಿವ ಸಲ್ಲಮರು ಹೇಳುವರು: ”

: أَحَبُّ الصلاةِ إلى اللهِ صلاةُ داودَ عليهِ السلامُ ، وأَحَبُّ الصيامِ إلى اللهِ صيامُ داودَ ، وكان ينامُ نصفَ الليلِ ويقومُ ثُلُثَهُ ، وينامُ سُدُسَهُ ، ويصومُ يومًا ويُفْطِرُ يومًا .

ಅಂದರೆ : ಅತೀ ಪ್ರೀತಿಯ ನಮಾಝ್ ಅಲ್ಲಾಹನ ಬಳಿ ದಾವುದ್ ಅಲೈಹಿ ಸ್ಸಲಾಮರ (ಅವರ ಮೇಲೆ ಶಾಂತಿ ವರ್ಷಿಸಲಿ) ನಮಾಜ್ ಆಗಿದೆ, ಮತ್ತು ಅತೀ ಪ್ರೀಯವಾದ ಉಪವಾಸ ವೃತ ಅಲ್ಲಾಹನ ಬಳಿ ದಾವುದರ ಉಪವಾಸ, ಅವರು ಅರ್ಧ ರಾತ್ರಿ ನಿದ್ರಿಸುತ್ತಿದ್ದರು ಮತ್ತು ರಾತ್ರಿಯ ಮೂರನೆಯ ಭಾಗದಲ್ಲಿ ನಮಾಝ್ ಸ್ಥಿರಪಡಿಸುತ್ತಿದ್ದರು,ಮತ್ತು ಆರನೇಯ ಭಾಗದಲ್ಲಿ ನಿದ್ರಿಸುತ್ತಿದ್ದರು,ಹಾಗೂ ಒಂದು ದಿನದ ನಂತರ ಇನ್ನೊಂದು ದಿನ ಉಪವಾಸ ವೃತ ಆಚರಿಸುತ್ತಿದ್ದರು.

ವರದಿಗಾರ: ಅಬ್ದುಲ್ಲಾಹ್ ಬಿನ್ ಅಮ್ರ್  ಮುಹದ್ದೀಸ್: ಬುಖಾರಿ   ಗ್ರಂಥ: ಸಹೀಹುಲ್ ಬುಖಾರಿ ಪುಟ ಅಥವಾ ಸಂಖ್ಯೆ :1131

ಹದೀಸ್ ನ ಸಂಕ್ಷಿಪ್ತ ಹುಕ್ಮ್: ಸಹೀಹ್ (3)

ನನ್ನನ್ನುದ್ದೇಶಿಸಿ ಪ್ರವಾದಿ ಸಲ್ಲಲ್ಲಾಹು ಅಲೈಹಿವ ಸಲ್ಲಮರು ಹೇಳಿದರು: ನಿನ್ನ ಜನಾಂಗದವರ ಮೇಲೆ ಸತ್ಯ ನಿಷೇಧದ ಭಯವಿರದಿದ್ದರೆ ನಾನು ಕಾಬಾ ಭವನವನ್ನು ಮುರಿದು ಅದನ್ನು ಇಬ್ರಾಹೀಮ ಅಲೈಹಿ ಸ್ಸಲಾಮ ರು(ಅವರ ಮೇಲೆ ಶಾಂತಿ ವರ್ಷಿಸಲಿ) ನಿರ್ಮಿಸಲೇಂದು ಹಾಕಿದ ಬುಡದ ಮೇಲೆ ನಿರ್ಮಿಸುತ್ತಿದ್ದೆ. ಏಕೆಂದರೆ ಖುರೈಶರಿಂದ ಆ ಭವ್ಯ ಭವನ ನಿರ್ಮಾಣದಲ್ಲಿ ಕೊರತೆಯಾಗಿದೆ,ಮತ್ತು ನಾನು ನಂತರ ಬರುವವರ ಮೇಲೆ ಹೊಣೆಹಾಕುತ್ತಿದ್ದೇನೆ.

ವರದಿಗಾರರು: ಆಯಿಷಾ ಉಮ್ಮುಲ್ ಮೂಮಿನೀನ್  ಮುಹದ್ದೀಸ್ : ಬುಖಾರಿ  ಗ್ರಂಥ : ಸಹೀಹುಲ್ ಬುಖಾರಿ  ಪುಟ ಅಥವಾ ಸಂಖ್ಯೆ :1585

ಮುಹದ್ದೀಸ್ ರ ಸಂಕ್ಷಿಪ್ತ ಹುಕ್ಮ್: ಸಹೀಹ್

ಅಲೈಹಿಸ್ಸಲಾಮ್ ಪದದ ಕುರಿತು ಉಲಮಾಗಳ ಹೇಳಿಕೆಗಳು ಮತ್ತು ನಿಲುವು

ಉಲಮಾಗಳ ಒಂದು ಬಹುಸಂಖ್ಯೆಯ ಹೇಳಿಕೆಯ ಪ್ರಕಾರ ಈ ಪದವು ಅಂಬಿಯಾಗಳಿಗೆ ಮಾತ್ರ ಸೀಮಿತ ವಾಗಿರುತ್ತದೆ,ಏಕೆಂದರೆ ಪೂರ್ವಿಕರು ಇನ್ನಿತರರಿಗೆ ಈ ಪದ ಪ್ರಯೋಗಿಸಲಿಲ್ಲ.

ಇಬ್ನು ಅಬ್ಬಾಸ್ ಹೇಳಿಕೆ: ಈ ಪದವು ಕೇವಲ ಅಲ್ಲಾಹನ ಸಂದೇಶವಾಹಕರಿಗೆ ಮಾತ್ರ ಶ್ರೇಯಸ್ಕರ.

ಇಮಾಮ್ ನವವಿ  ರಹಿಮಹುಲ್ಲಾಹ್ ಮುಸ್ಲಿಂ ಗ್ರಂಥದ ಶರಹ್ ದಲ್ಲಿ ಪ್ರಸ್ಥಾಪಿಸುತ್ತಾರೆ:

 ಅಂಬಿಯಾಗಳನ್ನು ಹೊರತುಪಡಿಸಿ ಇನ್ನಿತರರನ್ನು ವಿಶೇಶವಾಗಿ ಉದ್ದೇಶಿಸಿ ಉಪಯೋಗಿಸಬಾರದು,ಏಕೆಂದರೆ ಸ್ವಲಫ್ ಗಳು ಇದನ್ನು ಅಂಬಿಯಾಗಳೊಂದಿಗೆ ವಿಶಿಷ್ಟಗೊಳಿಸಿದ್ದಾರೆ. ಯಾವ ರೀತಿ ನಾವು ಅಝ್ಝವಝಲ್ಲ್ ಎಂಬ ಪದವನ್ನು ಅಲ್ಲಾಹನೊಂದಿಗೆ ಬಳಸುತ್ತೇವೆಯೋ ಅದರ ಹಾಗೆ ಈ ಪದ ಅಂಬಿಯಾಗಳೊಂದಿಗೆ ಸೀಮಿತವಾಗಿದೆ. ಏನು ನಾವು ಪ್ರವಾದಿಯವರೊಡನೆ ಅಝ್ಝವಝಲ್ಲ್ ಎಂಬ ಪದವನ್ನು ಬಳಸುತ್ತೇವೆಯೆ? ಉತ್ತರ ,ಇಲ್ಲ ಹಾಗಾದರೆ ಅಬುಬಕ್ಕರ್ ರೊಂದಿಗೆ ಅಲೈಹಿಸ್ಸಲಾಮ್ ಅಂಬುದು ಹೇಗೆ ತಾನೆ ಸರಿ? ಅರ್ಥ ಸರಿಯಾದರು ಪದದ ಉಪಯೋಗ ಸರಿಯಲ್ಲ.

ಇಬ್ನುಲ್ ಖಯ್ಯಿಮ್ ರಹಿಮಹುಲ್ಲಾಹ್ ಹೇಳಿಕೆ:

ಈ ವಿಷಯದಲ್ಲಿ ಎರಡು ನಿಲುವುಗಳಿವೆ, ಒಂದು  ಈ ಪದ ಅಂಬಿಯಾಗಳಿಗೆ ಶ್ರೇಯಸ್ಕರ, ಅವರನ್ನುದ್ದೇಶಿಸಿ ಅವರ ಸಂತತಿ ಹಾಗೂ ಅವರ ಸಹಚರರನ್ನೂ ಅನ್ವಯಿಸುವಂತೆ ಹೇಳುವುದು ಸಹ ಸರಿಯಾಗಿರುತ್ತದೆ. ಕೇವಲ ಅವರ ಸಂತತಿ ಅಥವಾ ಅವರ ಸಹಚರರನ್ನುದ್ದೇಶಿಸಿ ಅಲೈಹಿಸ್ಸಲಾಮರೆನ್ನುವುದು ಎಲ್ಲಿಯವರೆಗೆ ಸರಿಯೆಂಬುದು ಎರಡನೆಯ ಮಾತಾಗಿದೆ. ಉದಾ:- ಅಲ್ಲಾಹುಮ್ಮ ಸಲ್ಲಿ ಅಲಾ ಅಲಿ ಅಥವಾ ಹಸನ್ ಅಥವಾ ಹುಸೈನ್ ಅಥವಾ ಫಾತಿಮಾ ಇತ್ಯಾದಿ, ಇಲ್ಲಿ ಭಿನ್ನಾಬಿಪ್ರಾಯ ಉಂಟಾಗುತ್ತದೆ ಇಮಾಮ್ ಮಾಲಿಕರು ಹೇಳುವಂತೆ ಈ ರೀತಿ ಸ್ವಲಫ್ ಗಳಲ್ಲಿ ಇರಲಿಲ್ಲ.ಇವರಂತೆಯೆ ಅಬು ಹನೀಫಾ,ಮತ್ತು ಸುಫ್ ಯಾನ್ ಬಿನ್ ಉಯೈನಾ, ಸುಫ್ ಯಾನ್ ಅಸ್ಸೌರಿ  ಹಾಗೂ ತಾವೂಸ್ ಎಂಬುವವರು ಸಹ ಹೇಳಿದ್ದಾರೆ.

ಮೂಲಗಳು:

http://fatwa.islamweb.net/fatwa/index.php?page=showfatwa&lang=&Option=FatwaId&Id=37150

http://fatwa.islamweb.net/fatwa/index.php?page=showfatwa&Option=FatwaId&Id=38427

http://dorar.net/hadith?skeys=%D8%A3%D8%AD%D8%A8%20%D8%A7%D9%84%D8%B5%D9%84%D8%A7%D8%A9%20%D8%A5%D9%84%D9%89%20%D8%A7%D9%84%D9%84%D9%87%20%D8%B5%D9%84%D8%A7%D8%A9%20%D8%AF%D8%A7%D9%88%D8%AF%20%D8%B9%D9%84%D9%8A%D9%87%20%D8%A7%D9%84%D8%B3%D9%84%D8%A7%D9%85..

http://www.saaid.net/Doat/yahia/305.doc

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s